ಪ್ರಾಚೀನ ಕಾಲದಿಂದಲೂ ಧರ್ಮಪ್ರತಿಷ್ಠಾನ ಹಾಗು ಸಭ್ಯ ಸಮಾಜ ನಿರ್ಮಾಣಕ್ಕಾಗಿ ಬ್ರಾಹ್ಮಣ ಸಮುದಾಯವು ಕಂಕಣಬದ್ಧವಾಗಿದೆ. ಜ್ಞಾನಸಂಪನ್ನರೂ, ಸಂಸ್ಕಾರವಂತರೂ ಆಗಿರುವ ಅರ್ಹ ಬ್ರಾಹ್ಮಣ ವಧು ವರರಿಗೆ ಅವರವರ ಬೇಡಿಕೆಗೆ ತಕ್ಕಂತೆ ಸೂಕ್ತ ಕಂಕಣಭಾಗ್ಯ ಕಲ್ಪಿಸಿ ಸಮಾಜವನ್ನು ಸುಸಂಸ್ಕೄತವಾಗಿ ಜೀವನಮುಖಿಯಾಗಿಸುವಲ್ಲಿ ಶ್ರಮಿಸುವ ಪ್ರಾಮಾಣಿಕ ಸಂಸ್ಥೆಗಳಲ್ಲಿ ಮೈಸೂರಿನ ಅನುರಾಗ ವಧು-ವರಾನ್ವೇಷಣೆ ಕೇಂದ್ರವೂ ಒಂದು.
ಕಳೆದ ಸುಮಾರು ಇಪ್ಪತ್ತೈದು ವರ್ಷಗಳಿಂದ ಈ ಸಂಸ್ಥೆಯನ್ನು ಶ್ರೀಮತಿ ಹಾಗು ಶ್ರೀ ಎನ್.ದತ್ತಾತ್ರಿಯವರು ನೆಡಸಿಕೊಂಡು ಬರುತ್ತಿದ್ದಾರೆ. ಕುಟುಂಬದಲ್ಲಿರುವ ಮಕ್ಕಳಿಗೆ ವಧು-ವರರನ್ನು ಹುಡುಕುವ ಪ್ರಯತ್ನವು ಹವ್ಯಾಸವಾಗಿ, ಹವ್ಯಾಸವು ಸಮಾಜ ಸೇವೆಯಾಗಿ, ಸಮಾಜ ಸೇವೆಯ ಒಂದು ಸಂಸ್ಥೆಯಾಗಿ ಬೆಳೆದುಬಂದಿತು. ಈ ಸಂಸ್ಥೆಯಿಂದ ವಿಪ್ರಸಮುದಾಯದಲ್ಲಿ ನೂರಾರು ಯೋಗ್ಯ ಸಂಬಂಧಗಳು ಕೂಡಿ ಬಂದಿದ್ದು, ನೆಮ್ಮದಿಯ ಜೀವನ ಕಂಡುಕೊಂಡಿದ್ದಾರೆ.
ಸಾಮಾಜಿಕ ಕಾರ್ಯವನ್ನು ಅತ್ಯಂತ ಆಸ್ಥೆಯಿಂದ ನಡೆಸುತ್ತಿರುವ ಈ ಸಂಸ್ಥೆಯ ಕಾರ್ಯವ್ಯಾಪ್ತಿಯನ್ನು ವಿಶ್ವಸ್ಥರದಲ್ಲಿ ವಿಸ್ತರಿಸಲು ಅನುರಾಗ ಮ್ಯಾಟ್ರಿಮೊನಿ (www.anuragamatrimony.com) ಎಂಬ ವೆಬ್ ಸೈಟ್ ಅನ್ನು ರೂಪಿಸಲಾಗಿದೆ. ಈ ವೆಬ್ಸೈಟ್ ಸ್ಮಾರ್ತ, ವೈಷ್ಣವ ಹಾಗು ಶ್ರೀವೈಷ್ಣವ ಬ್ರಾಹ್ಮಣ ಮತಸ್ಥರಿಗಾಗಿ ಮೀಸಲಾಗಿದ್ದು, ಆಧುನಿಕ ವಿನ್ಯಾಸ ಹಾಗು ತಂತ್ರಜ್ಞಾನಗಳೊಂದಿಗೆ ಪರಿಪೂರ್ಣವಾಗಿದೆ. ವಿಪ್ರ ಸಮುದಾಯದ ಎಲ್ಲಾ ವಿದ್ಯಾರ್ಹತೆ ಹಾಗು ಉದ್ಯೋಗಸ್ಥ ವಧು-ವರರಿಗೆ ಅನುಕೂಲ ಮಾಡುವ ಒಂದು ಚಿಕ್ಕಪ್ರಯತ್ನ ನಮ್ಮದಾಗಿದೆ.
ಈ ವೆಬ್ ಸೈಟ್ ಬ್ರಾಹ್ಮಣರಿಗಾಗಿಯೇ ಮೀಸಲಾಗಿದ್ದು, ವಿಶೇಷವಾಗಿ ತ್ರಿಮತಸ್ಥ ( ಸ್ಮಾರ್ತ, ವೈಷ್ಣವ ಹಾಗು ಶ್ರೀ ವೈಷ್ಣವ) ಬ್ರಾಹ್ಮಣರಿಗೆ ಅನುಕೂಲವಾಗುವಂತೆ ರೂಪಿಸಲಾಗಿದೆ. ಅಪೇಕ್ಷಿಸುವವರಿಗೆ ಅನುಕೂಲವಾಗುವಂತೆ ವಧು-ವರರ ಮಾಹಿತಿಯನ್ನು ವಯಸ್ಸು, ಎತ್ತರ, ವಿದ್ಯಾರ್ಹತೆ, ಉದ್ಯೋಗ, ಉದ್ಯೋಗಸ್ಥಳ, ಗೋತ್ರ, ನಕ್ಷತ್ರಗಳೊಂದಿಗೆ ವಿಂಗಡಿಸಲು ಸಹಕಾರಿಯಾಗಿದೆ.
ಬ್ರಾಹ್ಮಣ ಸಮುದಾಯದಲ್ಲಿ ವಧುವರಾನ್ವೇಷಣೆ ಹಾಗು ಹೊಂದಾಣಿಕೆ ಒಂದು ದೊಡ್ಡ ಸಮಸ್ಯೆಯನ್ನು ಎದುರಿಸುತ್ತಿದೆ. ವಧು-ವರರ ಹುಡುಕಾಟದಲ್ಲಿ ಪೋಷಕರ ಅಲೆದಾಟ ಹಾಗು ಹೊಂದಾಣಿಕೆಯ ಜಟಿಲತೆಯು ಅಗಾಧವಾಗಿದೆ. ತಮ್ಮ ಅಪೇಕ್ಷೆಯ ವಿದ್ಯಾರ್ಹಾತೆ, ಉದ್ಯೋಗವಿರುವ ವಧು-ವರರನ್ನು ಹುಡುಕಲು ಆಕಾಂಕ್ಷಿಯಾಗಿರುವವರಿಗೆ ಅನುರಾಗ ಮ್ಯಾಟ್ರಿಮೋನಿಯು ಸಹಾಯಹಸ್ತವನ್ನು ನೀಡುತ್ತಿದೆ.
ಇಚ್ಛೆವುಳ್ಳಂತವರು ತಮ್ಮ ವಧು-ವರರ ಮಾಹಿತಿಯೊಂದಿಗೆ ಉಚಿತವಾಗಿ ನೋಂದಾಯಿಸಿಕೊಂಡು, ತಮಗೆ ಅನಕೂಲವಾಗುವಂತೆ ವಧು-ವರರನ್ನು ಆರಿಸಿ (SMS ಮೂಲಕ) ಸಂಪರ್ಕಮಾಡಬಹುದು. ಸಾಂದರ್ಭಿಕವಾಗಿ ಹಣಪಾವತಿಯ ಅವಶ್ಯಕತೆಯಿರುತ್ತದೆ. ಹೆಚ್ಚಿನ ಮಾಹಿತಿಗಾಗಿ 8105626363 ಗೆ ಕರೆ ಮಾಡಿ.
ಉಚಿತ ನೋಂದಣಿಗಾಗಿ ಇಲ್ಲಿ ಕ್ಲಿಕ್ ಮಾಡಿ – www.anuragamatrimony.com |
Recent Comments