ಹರಕೆಗಳಿಂದ ನಮ್ಮ ಕಾರ್ಯಗಳು ಸಿದ್ಧಿಗೊಳ್ಳಿಸಿಕೊಳ್ಳುವುದು ಹೇಗೆ??

ಮನೆ ಕಟ್ಟುವಾಗ, ಮದುವೆ ಮಾಡುವಾಗ ಹಾಗು ಇನ್ನಿತರ ತೊಂದರೆಗಳ ನಿವಾರಣೆಗೆ ದೇವರನ್ನು ಮೋರೆ ಹೊಕ್ಕಿ ಅಥವ ಗುರು ಸನ್ನಿಧಾನಗಳಿಗೆ ಭೇಟಿ ನೀಡಿ ಪರಿಹಾರಕ್ಕಾಗಿ ಅಂಗಲಾಚುವುದು ಸಹಜ. ತಮ್ಮ ಇಷ್ಟ ದೇವರಲ್ಲಿ ಸಂಕಲ್ಪದಿಂದ ಆಥವ ಹರಕೆ ಹೊರುವುದು ವಾಡಿಕೆ.

ವ್ರತಾ ಮಾಡುವುದು, ದೇವರ ಸನ್ನಿಧಿಯಲ್ಲಿ ಗಂಟೆ ಕಟ್ಟುವುದು, ಮುಡೀ ಕೊಡುವುದು, ಉರುಳು ಸೇವೆ ಮಾಡುವುದು ಜನರ ಸ್ವಭಾವ.  ನಮ್ಮ ಸಂಕಲ್ಪ  ಅಥವ ಹರಕೆಗಳು ಹಲವಾರು ಬಾರಿ ಸಿಧ್ಧಿಸುವುದಿಲ್ಲ, ನಮ್ಮ ಮನೋಭಿಲಾಶೆಗಳು ಸಫಲವಾಗುವುದಿಲ್ಲ.

ಸಂಕಲ್ಪ / ಹರಕೆಯನ್ನು ಮಾಡುವುದರ ಅರ್ಥ ಬೇರೆಯೇ ಇದೆ. ಸಂಕಲ್ಪ ಅಥವ ಹರಕೆ ಎಂಬುದು ದೇವರು ನಾವು ಬೇಡಿದ್ದನ್ನು ಕೊಡುತ್ತಾನೋ ಇಲ್ಲವೋ ಎಂದು ಸವಾಲು ಒಡ್ಡುವ ಒಂದು ಸಾಧನವಲ್ಲ. ತಾವು ಮಾಡಬೇಕಾದದ್ದನ್ನು ಮರೆತು, ತಮ್ಮ ತಪ್ಪುಗಳನ್ನು ಅರಿಯದೆ, ಎಲ್ಲವನ್ನೂ ದೇವರಿಗೆ ಬಿಟ್ಟು ಹರಕೆ ಹೊತ್ತರೆ ಖಂಡಿತಾ ಫಲಿಸುವುದಿಲ್ಲ.

ಸಂಕಲ್ಪ ಅಥಾವ ಹರಕೆ ಎನ್ನುವುದು ನಾವು ದೇವರ ಸಮಕ್ಷಮದಲ್ಲಿ ಮಾಡುವ ಒಂದು ಧೃಡ ನಿಶ್ಚಯ. ನಮ್ಮ ಕಾರ್ಯ ಸಿಧ್ಧಿಯಾಗುವವರೆಗೂ ನಾವು ಯಾವುದಾದರು ಒಂದು ರೀತಿ ನಿರ್ಬಂಧವನ್ನು ನಾವೇ ಮಾಡಿಕೊಳ್ಳುವುದು. ಸಂಕಲ್ಪ ಅಥವ ಹರಕೆಯೊಂದಿಗೆ “ನನಗೆ ಬೇಕು” ಅನ್ನುವ ಮನೋಭಾವ ಬಿಟ್ಟು “ನಾನು ಮಾಡುವೆ” ಎನ್ನುವ   ಸಿದ್ಧಾಂತವಿದ್ದಲ್ಲಿ  ಕಾರ್ಯಗಳು ಅವಶ್ಯವಾಗಿ ನೆರವೇರುವುದು.

ದೇವರನ್ನು/ ಗುರುವನ್ನು ನಂಬಿದರೆ ನಿಮ್ಮ ಸಕಲ ಇಷ್ಟಾರ್ಥಗಳು ನೆರವೇರುವುದೆಂದು ಹೇಳುವರು. ನಮ್ಮ ಕಾರ್ಯಕ್ಷಮತೆಯಲ್ಲಿ ನಮಗೆ ನಂಬಿಕೆ ಇದ್ದರೆ ನಮ್ಮ ಕಾರ್ಯಗಳು  ನೆರವೇರುವುದು ಖಚಿತ. ದೇವರಮೇಲೆ ಭಾರ ಹಾಕುವುದನ್ನು ಬಿಟ್ಟು, ನಮ್ಮ ಕೆಲಸದಲ್ಲಿ ಪ್ರಜ್ಞೆ ಇರಿಸಿದರೆ ದೇವರು ನಮಗೆ ಕಂಡಿತವಾಗಿ ದಾರಿ ತೋರಿಸುವನು.

ನಮ್ಮ ಕಾರ್ಯಗಳು ನೆರವೇರಬೇಕಾದರೆ ಈ ಮೂರು ಮುಖ್ಯ ನಿಯಮಗಳನ್ನು ಪಾಲಿಸಬೇಕು.

  1. ನಮಗೆ ಏನು ಬೇಕು / ಮಾಡಬೇಕು ಎನ್ನುವುದು ಪರಿಕಲ್ಪಿಸಿಕೊಳ್ಳುವುದು.
  2. ಸಂಕಲ್ಪಿತ ಕಾರ್ಯವುನ್ನು ಪೂರ್ಣಗೊಳಿಸಲು ಸತತ ಪ್ರಯತ್ನ ಮಾಡುವುದು.
  3. ಕಾರ್ಯ ಸಿಧ್ಧಿಯಾಗುವವರೆಗೂ ಆ ವಿಷಯದಲ್ಲಿ ಎಚ್ಚರ ವಹಿಸುವುದು.
  4. ಮನಃಶಕ್ತಿ ಧೃಡವಾಗಿಸಿಕೊಳ್ಳುವುದು.

ಯಾವುದೇ ಸಂಕಲ್ಪ ಹಾಗು ಹರಕೆಯಲ್ಲಿ ಈ ನಿಯಮಗಳು ಕೂಡಿರುವುದೋ ಆ ಕಾರ್ಯಗಳು ಶತಸಿದ್ಧಿಯಾಗುವುದು.

ನಾವು ದೇವರ ಪೂಜೆ ಮಾಡುವಾಗ / ದೇವರನ್ನು ಬೇಡುವಾಗ  ನಮ್ಮ  ಸಂಕಲ್ಪವು ತಿಳಿಯಾದಲ್ಲಿ ಆ ಪೂಜೆಯ ವಿಸರ್ಜನೆಯೊಡನೆ  ನಮ್ಮ ಅಭಿಲಾಶೆಗಳು ಕೊಚ್ಚಿಹೋಗುವುದು.

ನಮ್ಮ  ಕಾರ್ಯಗಳ  ಪೂರ್ಣತೆಯು ನಿಶ್ಚಯವಾಗಿಯೂ ನಮ್ಮ ಸಂಕಲ್ಪದ ಧೃಡತೆಯನ್ನು ಅವಲಂಬಿಸಿರುತ್ತದೆ.

0Shares

You may also like...

Leave a Reply

Your email address will not be published. Required fields are marked *