ಭಾವಚಿತ್ರ (ಫೋಟೋ) : ವಧು – ವರರ ಅನ್ವೇಷಣೆಯಲ್ಲಿ ಮಹತ್ವದ ಪಾತ್ರ

ಮಿತ್ರರೇ,

ವಧು ವರಾನ್ವೇಷಣೆಯಲ್ಲಿ  ಹುಡುಗ / ಹುಡುಗಿಯರಿಗೆ ಒಳ್ಳೆಯ ಪರಿಣಾಮವನ್ನು ಬೀರುವಂತೆ ಮಾಡುವುದರಲ್ಲಿ ಮೊದಲನೆಯದು ಅವರ ಭಾವಚಿತ್ರ. ಎಷ್ಟೇ ವಿದ್ಯಾವಂತರಿರಬಹುದು, ಒಳ್ಳೆಯ ಉದ್ಯೋಗದಲ್ಲಿರಬಹುದು, ಒಳ್ಳೆಯ ನಡವಳಿಕೆ ಇರಬಹುದು, ಆದರೆ, ಫೋಟೋದಲ್ಲಿ ಲಕ್ಷಣವಾಗಿ ಕಾಣದಿದ್ದಲ್ಲಿ ತಮ್ಮ ಮೊದಲ ಅನಿಸಿಕೆ ( ಫಸ್ಟ್ ಇಂಪ್ರೆಷನ್) ಭಿನ್ನವಾಗುವುದು.

ಎಲ್ಲರೂ ಸ್ಪುರದ್ರೂಪಿಗಳಲ್ಲಾ ನಿಜ, ಆದರೂ ಫೋಟೋ ಅತ್ಯಂತ ಮುಖ್ಯ ಪಾತ್ರ ವಹಿಸುತ್ತದೆ.  ಪೋಷಕರು ಮಕ್ಕಳ ಕಾಲೇಜ್ ನಲ್ಲಿ ತೆಗೆದ ಫೋಟೋ , ಕೆಲಸಕ್ಕೆ ಅಪ್ಲಿಕೇಶನ್ ಗೆ  ಲಗತ್ತಿಸುತ್ತಿದ್ದ ಭಾವಚಿತ್ರಗಳನ್ನೂ ಹಿಡಿದುಕೊಂಡು ಓಡಾಡುತ್ತಿರುವುದು ಈಗಲೂ ಕಾಣಬಹುದು.

“ನಮ್ಮ ಮಗ ಸುಂದರವಾಗಿದ್ದಾನೆ, ಅವನ ಪ್ರೊಫೈಲ್ / ಜಾತಕ ಕೂಡಿಬಂದರೆ ನಂತರ ಫೋಟೋ ಕಳಿಸುತ್ತೇವೆ” ಎನ್ನುವ ಮನೋಭಾವವನ್ನು ಹೊಂದಿದವರಿದ್ದಾರೆ. ಇಂತವರಿಗೆ “ಹೆತ್ತವರಿಗೆ ಹೆಗ್ಗಣ ಮುದ್ದು ಗಾದೆ ಕೇಳಿಲ್ಲವೇ” ಎಂಬುದೇ ಉತ್ತರ. ವಧು / ವರರಲ್ಲಿ ಒಳ್ಳೆಯ ಲಕ್ಷಣಕ್ಕಾಗಿ ಎಲ್ಲರೂ ದೃಷ್ಟಿಸುವರು, ಆದರೆ ತಮ್ಮ ಮಕ್ಕಳ ಭಾವಚಿತ್ರದಲ್ಲಿ ಒಳ್ಳೆಯ ಪರಿಣಾಮವಿದೆಯೇ ಎಂದು 90% ಪೋಷಕರು ಅವಲೋಕಿಸುವುದಿಲ್ಲ.

ಸ್ಟುಡಿಯೋದಲ್ಲಿ ತೆಗೆದ ಫೋಟೋವನ್ನು ನಿಜ ಬಣ್ಣ, ಸ್ವರೂಪವನ್ನು ತಿದ್ದಿ, ಸುಂದರವಾಗಿ ಕಾಣುವಂತೆ ಮಾಡುತ್ತಾರೆ. ಹಾಗಾಗಿ,  ಸ್ಟುಡಿಯೋದಲ್ಲಿ ತೆಗೆದ ಫೋಟೋ ಬಗ್ಗೆ ಎಚ್ಚರವಿರುವ ಕಾಲ. ಆದರೆ ಪ್ರೊಫೆಷನಲ್ ಫೋಟೋಗ್ರಫಿ ಫಲಕಾರಿಯಾಗಬಹುದು.

ಭಾವಚಿತ್ರದಲ್ಲಿ ಇರಬೇಕಾದ ಲಕ್ಷಣಗಳು :

. ಪ್ರೊಫೈಲ್ (ಮೊದಲ) ಫೋಟೋ ಬಹಳ ಮುಖ್ಯವಾದುದು. ಪ್ರೊಫೈಲ್ ಫೋಟೋದಲ್ಲಿ ಹುಡುಗ / ಹುಡುಗಿಯ ಮುಖ ಕೊಂಚ ಬಲಕ್ಕೆ ಅಥವಾ ಎಡಕ್ಕೆ ತಿರುಗಿದ್ದು, ನೇರವಾಗಿ ನೋಡುತ್ತಿರಬೇಕು. ಕೆಲವು ರಿಸರ್ಚ್ ಪ್ರಕಾರ ಮುಖ ಎಡಕ್ಕೆ ತಿರುಗಿದ ಫೋಟೋ ಒಳ್ಳೆಯದೆಂದು ತಿಳಿಸುತ್ತದೆ. ಪ್ರೊಫೈಲ್ ಫೋಟೋ ಎದೆಯ ಭಾಗದವರೆಗೆ (ಹಾಫ್) ಮಾತ್ರ ಸೀಮಿತವಾಗಿರಬೇಕು.

. ಮುಖದ ಮೇಲೆ ಬೆಳಕು ಪ್ರಶಸ್ತವಾಗಿರಬೇಕು, ಹಾಗೆಂದು ಬೆಳಕು ಅತಿಯಾಗೂ / ನೇರ ಸೂರ್ಯ ಕಿರಣವು ಇರಬಾರದು, ಒಂದು ಬದಿ ಅಥವಾ ಮೇಲಿನಿಂದ ಬೆಳಕು ಸೂಕ್ತವಲ್ಲ.

. ನಗು ಎಲ್ಲರಿಗೂ ಅರ್ಥವಾಗುವ ಭಾಷೆ. ಮುಖದಲ್ಲಿ ಮುಗುಳುನಗೆ / ಮಂದಹಾಸ / ಉಲ್ಲಾಸವಿರಿವ ಫೋಟೋ ಸಹಜವಾಗಿ ಆಕರ್ಷಣೆಯನ್ನು ಬೀರುತ್ತದೆ.

. ಹುಡುಗ / ಹುಡುಗಿಯ ವ್ಯಕ್ತಿತ್ವವನ್ನು ಹೋಲುವ ಫೋಟೋ ಖಂಡಿತಾ ಪರಿಣಾಮಕಾರಿಯಾಗಿ ವರ್ತಿಸುತ್ತದೆ. ಹುಡುಗಿಯು ಮಾಡ್ರನ್ ಆಗಿದ್ದು, ಸೀರೆ ಉಡುಗೆಯ ಫೋಟೋ ಅರ್ಥಗರ್ಭಿತವಾಗಿರುವುದಿಲ್ಲ.

. ಕೂಲಿಂಗ್ ಗ್ಲಾಸ್ ಅಥವಾ ಟೋಪಿ ಹಾಕಿರುವ ಫೋಟೋ ಖಂಡಿತಾ ಉಪಯೋಗಿಸಬೇಡಿ. ಗಲ್ಲದ ಮೇಲೆ ಬೆರಳಿಡುವುದು, ಕೈ ಕಟ್ಟಿ ನಿಲ್ಲುವುದು ಹಳೆಯಕಾಲದ್ದಾಯಿತು.

. ಕಲಾತ್ಮಕವಾದ ಭಾವಚಿತ್ರ ಕೃತಕ ಭಾವನೆಯನ್ನೇ ಬೀರುತ್ತದೆ. ಇಂದಿನ ಸ್ಮಾರ್ಟ್ ಫೋನ್ ಗಳಲ್ಲಿ ತೆಗೆದ ನ್ಯಾಚುರಲ್ ಅಥವಾ ಸೆಲ್ಫಿ ಫೋಟೋಗಳು ಹಲವೊಮ್ಮೆ ಒಳ್ಳೆಯ ಪ್ರಶಂಸೆ ಕೊಡುತ್ತದೆ.

. ಫೋಟೋ 6 ತಿಂಗಳಿಂದ ಒಂದು ವರ್ಷದ ಒಳಗೆ ತೆಗೆದಿರಬೇಕು. ಹಳೆಯ ಫೋಟೋಗಳು ಖಂಡಿತವಾಗಿ ತೊಂದರೆಗೆ ಎಡೆಮಾಡಿಕೊಡುತ್ತದೆ.

. ಒಂದೇ ಫೋಟೋಗಿಂತ  2 ಅಥವಾ 3 ಫೋಟೋ ಲಗತ್ತಿಸುವುದು ಒಳ್ಳೆಯದು. ಫೋಟೋಗಳು ಬೇರೆ ಬೇರೆ ಉಡುಗೆ, ಬಣ್ಣಗಳಲ್ಲಿ ಇದ್ದರೆ ಉತ್ತಮ. ಹುಡುಗಿಯರು ಫ್ಲ್ಯಾಶ್ ಕಲರ್ ಮತ್ತು ಐಶ್ಯಾಡೋ ಯಂತ್ರಿಸುವುದು ಉತ್ತಮ. ಹುಡುಗರು ತಲೆಯನ್ನು ಓರೆ ಮಾಡುವುದು ಉತ್ತಮವಲ್ಲ,

. ಹೊರಾಂಗಣ ಭಾವಚಿತ್ರ ಹೆಚ್ಚು ಫಲಕಾರಿ. ಆದರೆ ಭಾವಚಿತ್ರದ ಹೆನ್ನೆಲೆ, ಹಿನ್ನೆಲೆಯಾಗಬೇಕೇ ಹೊರತು ಪ್ರಾಮಾಣಿಕವಾಗಿ ಕಾಣಬಾರದು. ಹೆನ್ನೆಲೆಯು ಬ್ಲರ್ ಆಗಿದ್ದಲ್ಲಿ ಹುಡುಗ / ಹುಡುಗಿಯ ಮುಖ ಚೆನ್ನಾಗಿ ವ್ಯಕ್ತವಾಗುವುದು.

೧೦. ನಿಮ್ಮ ಆತ್ಮ ವಿಶ್ವಾಸ ಹೆಚ್ಚಿದ್ದಲ್ಲಿ ನಿಮ್ಮ ಭಾವಚಿತ್ರವೂ ಹಾಗೆಯೇ ಇರುತ್ತದೆ. ಆದ್ದರಿಂದ ಭಾವಚಿತ್ರವು ತೆಗೆಯುವಾಗ ನಿಮ್ಮ ಮೂಡ್ ಸರಿಯಾಗಿರುವುದು ಅಷ್ಟೇ ಮುಖ್ಯ.

ನಿಮ್ಮಲ್ಲಿರುವ ಭಾವಚಿತ್ರಗಳನ್ನು ನಿಮ್ಮ ಆತ್ಮಿಯರೊಂದಿಗೆ ಹಂಚಿಕೊಂಡು, ಅವರಿಗೆ ಕೆಲವನ್ನು ಆರಿಸಿಕೊಡುವಂತೆ ಹೇಳಿ. ಹುಡಗ / ಹುಡುಗಿಯರ ವಯೋಮಿತಿಯಲ್ಲಿರುವ ಜವಾಬ್ದಾರಿಯುತರಾದವರಾದರೆ ಉತ್ತಮ.

ಸಂದರ್ಭಗಳೇ ಸಂಬಂಧಗಳ ಆಳವನ್ನು ಮತ್ತು ವಾಸ್ತವವನ್ನು ತಿಳಿಸುತ್ತದೆ

ಶುಭಾಷಯಗಳು

0Shares

You may also like...

2 Responses

  1. Prakash V Kulkarni says:

    First marriage was divorced due to non cooperation of married girl . She has never allowed to even touch him . He is still batchlor We are searching for for unmarried kanya . No education restrictions . we are ready to help if they are financially week

Leave a Reply

Your email address will not be published. Required fields are marked *