ಹರಕೆಗಳಿಂದ ನಮ್ಮ ಕಾರ್ಯಗಳು ಸಿದ್ಧಿಗೊಳ್ಳಿಸಿಕೊಳ್ಳುವುದು ಹೇಗೆ??

ಮನೆ ಕಟ್ಟುವಾಗ, ಮದುವೆ ಮಾಡುವಾಗ ಹಾಗು ಇನ್ನಿತರ ತೊಂದರೆಗಳ ನಿವಾರಣೆಗೆ ದೇವರನ್ನು ಮೋರೆ ಹೊಕ್ಕಿ ಅಥವ ಗುರು ಸನ್ನಿಧಾನಗಳಿಗೆ ಭೇಟಿ ನೀಡಿ ಪರಿಹಾರಕ್ಕಾಗಿ ಅಂಗಲಾಚುವುದು ಸಹಜ. ತಮ್ಮ ಇಷ್ಟ ದೇವರಲ್ಲಿ ಸಂಕಲ್ಪದಿಂದ ಆಥವ ಹರಕೆ ಹೊರುವುದು ವಾಡಿಕೆ.

ವ್ರತಾ ಮಾಡುವುದು, ದೇವರ ಸನ್ನಿಧಿಯಲ್ಲಿ ಗಂಟೆ ಕಟ್ಟುವುದು, ಮುಡೀ ಕೊಡುವುದು, ಉರುಳು ಸೇವೆ ಮಾಡುವುದು ಜನರ ಸ್ವಭಾವ.  ನಮ್ಮ ಸಂಕಲ್ಪ  ಅಥವ ಹರಕೆಗಳು ಹಲವಾರು ಬಾರಿ ಸಿಧ್ಧಿಸುವುದಿಲ್ಲ, ನಮ್ಮ ಮನೋಭಿಲಾಶೆಗಳು ಸಫಲವಾಗುವುದಿಲ್ಲ.

ಸಂಕಲ್ಪ / ಹರಕೆಯನ್ನು ಮಾಡುವುದರ ಅರ್ಥ ಬೇರೆಯೇ ಇದೆ. ಸಂಕಲ್ಪ ಅಥವ ಹರಕೆ ಎಂಬುದು ದೇವರು ನಾವು ಬೇಡಿದ್ದನ್ನು ಕೊಡುತ್ತಾನೋ ಇಲ್ಲವೋ ಎಂದು ಸವಾಲು ಒಡ್ಡುವ ಒಂದು ಸಾಧನವಲ್ಲ. ತಾವು ಮಾಡಬೇಕಾದದ್ದನ್ನು ಮರೆತು, ತಮ್ಮ ತಪ್ಪುಗಳನ್ನು ಅರಿಯದೆ, ಎಲ್ಲವನ್ನೂ ದೇವರಿಗೆ ಬಿಟ್ಟು ಹರಕೆ ಹೊತ್ತರೆ ಖಂಡಿತಾ ಫಲಿಸುವುದಿಲ್ಲ.

ಸಂಕಲ್ಪ ಅಥಾವ ಹರಕೆ ಎನ್ನುವುದು ನಾವು ದೇವರ ಸಮಕ್ಷಮದಲ್ಲಿ ಮಾಡುವ ಒಂದು ಧೃಡ ನಿಶ್ಚಯ. ನಮ್ಮ ಕಾರ್ಯ ಸಿಧ್ಧಿಯಾಗುವವರೆಗೂ ನಾವು ಯಾವುದಾದರು ಒಂದು ರೀತಿ ನಿರ್ಬಂಧವನ್ನು ನಾವೇ ಮಾಡಿಕೊಳ್ಳುವುದು. ಸಂಕಲ್ಪ ಅಥವ ಹರಕೆಯೊಂದಿಗೆ “ನನಗೆ ಬೇಕು” ಅನ್ನುವ ಮನೋಭಾವ ಬಿಟ್ಟು “ನಾನು ಮಾಡುವೆ” ಎನ್ನುವ   ಸಿದ್ಧಾಂತವಿದ್ದಲ್ಲಿ  ಕಾರ್ಯಗಳು ಅವಶ್ಯವಾಗಿ ನೆರವೇರುವುದು.

ದೇವರನ್ನು/ ಗುರುವನ್ನು ನಂಬಿದರೆ ನಿಮ್ಮ ಸಕಲ ಇಷ್ಟಾರ್ಥಗಳು ನೆರವೇರುವುದೆಂದು ಹೇಳುವರು. ನಮ್ಮ ಕಾರ್ಯಕ್ಷಮತೆಯಲ್ಲಿ ನಮಗೆ ನಂಬಿಕೆ ಇದ್ದರೆ ನಮ್ಮ ಕಾರ್ಯಗಳು  ನೆರವೇರುವುದು ಖಚಿತ. ದೇವರಮೇಲೆ ಭಾರ ಹಾಕುವುದನ್ನು ಬಿಟ್ಟು, ನಮ್ಮ ಕೆಲಸದಲ್ಲಿ ಪ್ರಜ್ಞೆ ಇರಿಸಿದರೆ ದೇವರು ನಮಗೆ ಕಂಡಿತವಾಗಿ ದಾರಿ ತೋರಿಸುವನು.

ನಮ್ಮ ಕಾರ್ಯಗಳು ನೆರವೇರಬೇಕಾದರೆ ಈ ಮೂರು ಮುಖ್ಯ ನಿಯಮಗಳನ್ನು ಪಾಲಿಸಬೇಕು.

 1. ನಮಗೆ ಏನು ಬೇಕು / ಮಾಡಬೇಕು ಎನ್ನುವುದು ಪರಿಕಲ್ಪಿಸಿಕೊಳ್ಳುವುದು.
 2. ಸಂಕಲ್ಪಿತ ಕಾರ್ಯವುನ್ನು ಪೂರ್ಣಗೊಳಿಸಲು ಸತತ ಪ್ರಯತ್ನ ಮಾಡುವುದು.
 3. ಕಾರ್ಯ ಸಿಧ್ಧಿಯಾಗುವವರೆಗೂ ಆ ವಿಷಯದಲ್ಲಿ ಎಚ್ಚರ ವಹಿಸುವುದು.
 4. ಮನಃಶಕ್ತಿ ಧೃಡವಾಗಿಸಿಕೊಳ್ಳುವುದು.

ಯಾವುದೇ ಸಂಕಲ್ಪ ಹಾಗು ಹರಕೆಯಲ್ಲಿ ಈ ನಿಯಮಗಳು ಕೂಡಿರುವುದೋ ಆ ಕಾರ್ಯಗಳು ಶತಸಿದ್ಧಿಯಾಗುವುದು.

ನಾವು ದೇವರ ಪೂಜೆ ಮಾಡುವಾಗ / ದೇವರನ್ನು ಬೇಡುವಾಗ  ನಮ್ಮ  ಸಂಕಲ್ಪವು ತಿಳಿಯಾದಲ್ಲಿ ಆ ಪೂಜೆಯ ವಿಸರ್ಜನೆಯೊಡನೆ  ನಮ್ಮ ಅಭಿಲಾಶೆಗಳು ಕೊಚ್ಚಿಹೋಗುವುದು.

ನಮ್ಮ  ಕಾರ್ಯಗಳ  ಪೂರ್ಣತೆಯು ನಿಶ್ಚಯವಾಗಿಯೂ ನಮ್ಮ ಸಂಕಲ್ಪದ ಧೃಡತೆಯನ್ನು ಅವಲಂಬಿಸಿರುತ್ತದೆ.

0Shares

You may also like...

4 Responses

 1. A. Vasudeva Adhikari says:

  ವಧೂ ವರರ ತಂದೆ ತಾಯಿಗಳ ಪಾತ್ರ ಮದುವೆ ಮೊದಲು ಬಹಳಷ್ಟಿದೆ. ತಮ್ಮ ಮಗನ/ಮಗಳ ಬೇಕು/ಬೇಡಗಳನ್ನು ಸರಿಯಾಗಿ ತಿಳಿದು ಕೊಂಡು ಮೊದಲ ಹಂತದಲ್ಲಿ ಕನ್ಯಾ/ ವರರ ತಂದೆ ತಾಯಿಗಳೊಂದಿಗೆ ಸವಿವರವಾಗಿ ಚರ್ಚಿಸಿ, ತಮಗೆ ಒಪ್ಪಿಗೆಯಾದ ಪಕ್ಷದಲ್ಲಿ ಎರಡನೆಯ ಹಂತಕ್ಕೆ ಹೋಗುವಲ್ಲಿ ಯಶಸ್ವಿಯಾಗಬೇಕು. ನಂತರ ಗಂಡು ಹೆಣ್ಣು ಪರಸ್ಪರ ಮಾತನಾಡಿಕೊಂಡು ಒಂದು ನಿರ್ಧಾರಕ್ಕೆ ಬಂದು, ತಮ್ಮ ಅಭಿಪ್ರಾಯವನ್ನು ತಂದೆ/ತಾಯಿಗಳ ಮೂಲಕ ಹಂಚಿ ಕೊಳ್ಳಬೇಕು. ಈ ಕಾರ್ಯಗಳನ್ನು ನಡೆಸುವಾಗ ಬಡವ ಬಲ್ಲಿದ, ಮೇಲಿನ ವರ್ಗ ಕೆಳಗಿನ ಉಪಜಾತಿ, ವಿದ್ಯಾವಂತ ಅವಿದ್ಯಾವಂತ, ಅಂತ ನೋಡದೆ ಪರಸ್ಪರ ಗೌರವಾನ್ವಿತರಾಗಿ, ಯಾರ ಮನಸ್ಸಿಗೆ ನೋವು ಮಾಡದೆ, ಸಮಯ ಹಾಳು ಮಾಡದೆ ಎರಡೂ ಕಡೆಯವರು ಒಟ್ಟಿಗೆ ಸೇರಿ ತೀರ್ಮಾನ ಮಾಡಿದರೆ ಬಹಳ ಉತ್ತಮ. ಆದಷ್ಟು ತಮ್ಮ ಮಕ್ಕಳ ಒಳ್ಳೆಯ ಭವಿಷ್ಯದ ಹಿತ ದೃಷ್ಟಿಯಿಂದ ಸತ್ಯದ ದಾರಿಯಲ್ಲಿ ನಡೆದರೆ ಅದು ದೇವರು ಮೆಚ್ಚುವ ಕೆಲಸ.

  • Admin says:

   ನಿಮ್ಮ ಮಾತು ಸರಿ, ವಾಸುದೇವ್ ಅವರೇ. ನಾವು ಮುಂದುವರೆದ ಜನಾಂಗ, ವಿದ್ಯಾವಂತರು. ಆದರೆ ಕೆಲವು ವಿಚಾರದಲ್ಲಿ ಇನ್ನು ತಿದ್ದಿಕೊಳ್ಳುವುದು ಬಹಳಷ್ಟಿದೆ.

 2. Vidya S K says:

  I agree with the presentation. It has so happened that the families are best. We are letting the children for talks. The children do not know the facts of life. They go on the superficial talk of one time wherein they do not know what they have to look in the biy/girl. The boys are usually shy and do not know how to talk. They mimicry what is shown on face book/youtube/Instagram.

  My sincere common perception is if the families agree and they are of the opinion that their children will be happy at the boy/ girl’s getting together because of the family atmosphere, ideal would be to inform the children that they will be happy with each other’s getting to get her. The proposals are going array as the children are given the choice and they do not know the facts of life.

  My son’s predicament is too good and doesn’t know how to be with girls as there is no boyfriend/girlfriend in our family. The alliance gets broken with the boy/girl’s meeting point.

  I need counseling for my son to get through this initial hurdle. He’s a wonderful boy with decent employment independently dependent for emotional support from his family 👪

Leave a Reply

Your email address will not be published. Required fields are marked *