ಮಕ್ಕಳಿಗೆ ಬಾಳಸಂಗಾತಿ ಹುಡುಕುತ್ತಿರುವ ಪೋಷಕರಿಗೆ ಸಲಹೆ.

ಬಾಳ ಸಂಗಾತಿ ಹೇಗಿರಬೇಕು?

ಈ ಪ್ರಶ್ನೆಗೆ ಪೋಷಕರ ದೃಷ್ಟಿಕೋನವೇ ಬೇರೆ, ಮದುವೆಯಾಗುವವರ ದೃಷ್ಟಿಕೋನವೇ ಬೇರೆ. ಅನೇಕ ವೇಳೆ ನಾವೇನು ಹೀಗೇ ಆಡಿದೆವಾ? ಎಂದು ಪೋಷಕರು ಕೇಳುತ್ತಾರೆ ಎಂದು ಮಕ್ಕಳು ಅಲವತ್ತುಕೊಳ್ಳುತ್ತಾರೆ!

ನಮ್ಮ ಕಾಲ ಬೇರೆ, ಈಗಿನ ಕಾಲ ಬೇರೆ. ಅಂದಿನ ಅಗತ್ಯಗಳು, ಅಂದಿನ ನಿಯಮಗಳು ಇಂದಿಗೂ ಅನ್ವಯವಾಗುತ್ತವೆ ಎಂದು ನಿರೀಕ್ಷಿಸುವುದು ತಪ್ಪು.
ಪೋಷಕರಿಗೆ ಅರಿವಾಗದ ಕೆಲವು ಸಂಗತಿಗಳು ಈಗಿನ ದಂಪತಿಗಳ ನಡುವೆ ನಡೆದಿರುತ್ತವೆ. ಪೋಷಕರ ತಿಳುವಳಿಕೆಗಾಗಿ ಎರಡು ಅಂಶಗಳನ್ನು ಮಾತ್ರ ಇಲ್ಲಿ ಪ್ರಸ್ತಾಪಿಸ ಬಯಸುತ್ತೇನೆ.

ಮೊದಲನೆಯದು ನಮ್ಮ ದೇಶದಲ್ಲಿ ಸುಮಾರು ಶೇ 40 ಪ್ರಕರಣಗಳಲ್ಲಿ ದಂಪತಿಗಳ ನಡುವೆ ದೇಹ ಸಂಪರ್ಕ ಇಲ್ಲ. ಎರಡನೆಯದು ಮಗುವಾಗಲು ಬೇಕಾದ ಅಗತ್ಯಗಳು ಅನೇಕ ಗಂಡಸರಲ್ಲಿ ಇಲ್ಲ. ಇವೆರಡೂ ಉತ್ಪ್ರೇಕ್ಷಿತವಲ್ಲ. ವಾಸ್ತವಿಕ ಪ್ರಸಂಗಗಳು.

ಆದುದರಿಂದ ಮಕ್ಕಳ ಬಾಳ ಸಂಗಾತಿಯನ್ನು ಕುರಿತಂತೆ ಪೋಷಕರು ತಮ್ಮ ಚಿಂತನೆಯನ್ನು ಸ್ವಲ್ಪ ಮಟ್ಟಿಗೆ ವಿಸ್ತರಿಸಿಕೊಳ್ಳ ಬೇಕು.
ಒಳ್ಳೆಯ ಸಂಬಂಧ ಎಂದು ಪೋಷಕರಿಗೆ ಅನಿಸಿದವು ಮಕ್ಕಳಿಗೆ ಹಿಡಿಸಬೇಕು ಎಂದಿಲ್ಲ. ಪೋಷಕರು ಮನೆತನ, ಅವರ ಸ್ಥಿತಿ ಗತಿ ಇಂತಹ ಅಂಶಗಳನ್ನು ಗಮನಿಸಿದರೆ ಮಕ್ಕಳು ತಮ್ಮದೇ ಆದ ನಿರೀಕ್ಷೆಗಳ ಹಿನ್ನೆಲೆಯಲ್ಲಿ ತುಲನೆ ಮಾಡುತ್ತಾರೆ. ಧೀರ್ಘಕಾಲ ಅವರೇ ಜೊತೆಯಲ್ಲಿ ಬಾಳ ಬೇಕಾದವರು ಎನ್ನುವುದನ್ನು ನೆನಪಿಡಬೇಕು.

ಸೋದರ ಮಾವನಿಗೆ (ಅಥವ ಹತ್ತಿರದ ಸಂಬಂಧದಲ್ಲಿಯೇ) ಕೊಟ್ಟು ಮದುವೆ ಮಾಡುವ ಸಂಪ್ರದಾಯಕ್ಕೆ ತೆರೆ ಬೀಳಬೇಕು. ಇದು ಹುಟ್ಟುವ ಮಕ್ಕಳ ಮೇಲೆ ಹಲವು ರೀತಿಯ ಪರಿಣಾಮ ಬೀರುತ್ತಿವೆ. ಪೋಷಕರಿಗೆ ಅರ್ಥವಾಗಬೇಕು ಎಂಬ ಕಾರಣದಿಂದ ನಾನು ಕಾಫಿ ಪುಡಿಯ ಉದಾಹರಣೆ ಕೊಡುವುದುಂಟು. ಬೇರೆ ಕಾಫಿ ಪುಡಿ ಹಾಕದೆ ಹಾಕಿರುವ ಕಾಫಿಪುಡಿಯಿಂದಲೇ ಚರಟವನ್ನು ಮಾಡಿಕೊಂಡು ಕಾಫಿ ಮಾಡುತ್ತ ಹೋದರೆ ಸ್ವಾದ ಎಷ್ಟರ ಮಟ್ಟಿಗೆ ಉಳಿಯುವುದು? ಅದೇ ರೀತಿ ಅದದೇ ಜೀನ್ಗಳ ಮಿಶ್ರಣವಾದರೆ ಗುಣಮಟ್ಟ ಉಳಿಯುವುದು ಎಷ್ಟರ ಮಟ್ಟಿಗೆ ಸಾಧ್ಯ?

ಮದುವೆಯಾದ ಒಂದು ವರ್ಷದಲ್ಲಿ ಮಗುವಾಗಿ ಬಿಡಬೇಕು ಎನ್ನುವ ನಿರೀಕ್ಷೆಗೂ ತೆರೆ ಬೀಳಬೇಕು. ಇದು ದಂಪತಿಗಳ ನಡುವೆ ಹೊಂದಾಣಿಕೆಗೆ ಸಮಯವನ್ನೇ ಕೊಡುವುದಿಲ್ಲ. ಅಂತಹ ದಂಪತಿಗಳು ವಿಚ್ಛೇದನದ ಮೊರೆ ಹೋಗುವುದು, ಅದಕ್ಕಾಗಿ ಮಕ್ಕಳನ್ನು ದಾಳಗಳನ್ನಾಗಿ ಬಳಸಿಕೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ. ಎರಡು ಮೂರು ವರ್ಷ ಅವರಿಬ್ಬರೂ ಜೊತೆಯಲ್ಲಿದ್ದು ಹೊಂದಾಣಿಕೆ ಮಾಡಿಕೊಂಡು ಅನಂತರ ಮಗುವಾಗುವುದು ಉತ್ತಮ.

ಮೂರನೆಯದನ್ನು ಸ್ವಲ್ಪ ನೇರವಾಗಿಯೇ ಹೇಳುವುದು ಉತ್ತಮ ಎನಿಸುತ್ತದೆ. ಈ ದೃಷ್ಟಿಯಿಂದ ಅನೇಕ ಪೋಷಕರು ಚಿಂತಿಸಿಯೇ ಇರುವುದಿಲ್ಲ. ಅದನ್ನು ಸಹಜ, ಅದರಲ್ಲೇನಿದೆ ಎಂದು ನಿರ್ಲಕ್ಷಿಸಿರುತ್ತಾರೆ. ಮದುವೆ ಆಗುವವರಿಗೆ ಮದುವೆ ಆಗಬೇಕಾದವರ ಮೂತಿಗೆ ಮುತ್ತು ಕೊಡಲು ಮನಸ್ಸು ಆಗಬೇಕು!
ನಮ್ಮ ಕಾಲದಲ್ಲಿ ಇವೆಲ್ಲ ಕೇಳಲಿಲ್ಲ ಎಂದು ಮಕ್ಕಳ ಮಾತುಗಳನ್ನು, ಭಾವನೆಗಳನ್ನು ಕಡೆಗಣಿಸುವುದು ನಾಲ್ಕನೆಯ ತಪ್ಪು. ನಿಮ್ಮ ಕಾಲದಲ್ಲಿ ಒಲ್ಲದ ಮದುವೆ ಮಾಡಿದರೆ, ಹಳೆಯ ಪ್ರೇಮಿಗಳು ಒಂದಾಗಿ ಬಾಳ ಸಂಗಾತಿಯನ್ನು ಕೊಲೆ ಮಾಡುತ್ತಿರಲಿಲ್ಲ.

ಮಕ್ಕಳೊಡನೆ ಮದುವೆ ವಿಷಯ ಮಾತನಾಡುವಾಗ ಈ ಅಂಶಗಳನ್ನು ಗಮನದಲ್ಲಿಟ್ಟು ಕೊಂಡಿರುವುದು ಒಳ್ಳೆಯದು.

ತಮ್ಮ ಮಗ / ಮಗಳ ಮದುವೆಯನಂತರ ಅವರನ್ನು ತಮ್ಮ ಕಡಿವಾಣದಲ್ಲಿರಬೇಕೆಂಬ ಬಯಕೆ ಪೋಷಕರನ್ನು ಅವಸರಿಸಿರಬಹುದು. ಅತ್ತೆ-ಸೊಸೆಯರ ನಡುವಣ ಸಂಘರ್ಷಗಳಿಗೆ ಹೆಚ್ಚಿನ ಸಲ ಇದೇ ಕಾರಣವಾಗಿರುತ್ತದೆ. ಹಲವು ಪೋಷಕರು, ಅದರಲ್ಲಿಯೂ ತಂದೆಯರು ಮಗನ, ಸೊಸೆಯ ಹಣದ ಮೇಲೂ ನಿಯಂತ್ರಣ ಹೊಂದ ಬಯಸುತ್ತಾರೆ. ಪೋಷಕರು ಮದುವೆಯ ನಂತರ ಮಗ ಅಥವ ಮಗಳನ್ನು ಅವರ ಜೀವನ ನಡೆಸಿಕೊಂಡು ಹೋಗಲು ಬಿಡುವುದು ಉತ್ತಮ.

ಇಂದಿಗೂ ಸೊಸೆಯನ್ನು ಕುಟುಂಬದ ಸದಸ್ಯೆ ಎಂಬಂತೆ ನಡೆಸಿಕೊಳ್ಳದ ಕುಟುಂಬಗಳನೇಕವಿವೆ. ಅಂತಹ ಕೆಲವು ಕುಟುಂಬಗಳಲ್ಲಿ ಮದುವೆಯಾಗಿ ಹೋಗಿರುವ ಮಗಳಿಗೆ ಈ ಸ್ಥಾನವನ್ನು ಮುಂದುವರೆಸಿಕೊಂಡು ಹೋಗಿದ್ದಾರೆ. ಇದು ಹಲವು ಸಂಘರ್ಷಗಳಿಗೆ ನೀರೆರೆಯುತ್ತದೆ. ಮಗಳನ್ನು ಅತಿಥಿಯಾಗಿಯೂ, ಸೊಸೆಯನ್ನು ಮನೆಗೆ ಬಂದ ಮಗಳೆಂದೂ ಭಾವಿಸುವುದು ಹಾಗೂ ಸೊಸೆಯರು ಅತ್ತೆ-ಮಾವಂದಿರನ್ನು ತನ್ನ ಪೋಷಕರಂತೆ ಪ್ರೀತಿಯಿಂದ ನೋಡಿಕೊಳ್ಳುವುದೂ ಉತ್ತಮ ಬಾಂಧವ್ಯಕ್ಕೆ ಬೇಕಾಗಿರುವ ಪರಿವರ್ತನೆ.

ಹಲವು ಪೋಷಕರು ಇಂದು ಅಳಿಯನಾಗುವವನಿಗೆ ಯಾವ ಜವಾಬ್ದಾರಿಯೂ ಇರಬಾರದೆಂದು (ಆಥರ್ಕವಿರಬಹುದು, ಕರ್ತವ್ಯ ನಿಮಿತ್ತವಿರಬಹುದು.) ಬಯಸುವರು. ಇದು ಬಹಳ ತಪ್ಪು. ಯಾವುದೇ ಜವಾಬ್ಧಾರಿ ಇರದ ಬಾಳಿಗೆ ಸಣ್ಣ ಕಿರಿಕಿರಿಗಳೇ ಬ್ರೃಹದಾಕಾರವಾಗುವುದು ಸಹಜ.

ವಿದ್ಯೆ ಇಲ್ಲದ / ಅಥವ ಕಡಿಮೆ ವಿದ್ಯಾರ್ಹತೆ ಇರುವ ಹೆಣ್ಣು ಮಕ್ಕಳ ಸಿಗುವುದೇ ವಿರಳವಾಗಿದೆ. ಉನ್ನತ ವ್ಯಾಸಂಗ ಮಾಡಿದ ಅಥವ ಉದೋಗಸ್ಥ ಹೆಣ್ಣು ಮಕ್ಕಳಲ್ಲಿ ಮಡಿ- ಮೈಲಿಗೆಯನ್ನು ಬಯಸುವುದಾದರೆ, ನಿಮ್ಮ ಹುಡುಕಾಟ ಹಲವು ವರ್ಷಗಳಾದರೂ ಅಶ್ಚರ್ಯವೇನಿಲ್ಲ.

ನಮಗೆ ಒಳ್ಳೆಯ ಹುಡುಗಿ / ಹುಡುಗ ಬೇಕು, ಜನ ಒಳ್ಳೆಯವರಾಗಿರ ಬೇಕು, ಒಳ್ಳೆ ಸಂಬಂಧ ಬೇಕು ಎನ್ನುವುದೇ ಎಲ್ಲರ ಬಯಕೆ. ಒಳ್ಳೆಯತನಕ್ಕೆ ಸಟರ್ಫಿಕೇಟ್ ಯಾರೂ ಕೊಡಲಾರರು. ಆ ಒಳ್ಳೆಯತನವನ್ನು ಅಳೆಯುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ.

0Shares

You may also like...

5 Responses

  1. Geethakiran says:

    It is very meaningful. Artha poorna vada vivara vishaya dhanyavadagalu to Anuragamatrimony

  2. Sreekanta shastry says:

    Well analised

  3. Latha says:

    We the parents accepts or sacrifice for kids.but ther thinking don’t match. So it causes delay in marriage

    • Admin says:

      Along with it parents rather need to analyse the current situations, trends and the generation. Proper counselling for the parents in this regard will surely help to bridge the gap.

  4. Mrs. Shilparao says:

    V. Well said

Leave a Reply to Mrs. Shilparao Cancel reply

Your email address will not be published. Required fields are marked *