ಅಮೇರಿಕಾದ ವರ ಬೇಕೇ …….. ಈ ಕೆಲವು ವಿಚಾರ ನಿಮಗೆ ತಿಳಿದಿರಲಿ.

ಅಮೇರಿಕಾ ಅಮೇರಿಕಾ … ಎಂದು ಚಡಪಡಿಸುವ (ವಧು) ಕನ್ಯಾ ಪೋಷಕರೇ, ಅಮೇರಿಕಾದಲ್ಲಿರುವ ಹುಡುಗರನ್ನು ಒಪ್ಪಿಕೊಳ್ಳುವ ಮೊದಲು ಈ ವಿಚಾರಗಳನ್ನು ಅವಲೋಕಿಸಿ ಮುಂದುವರೆಯಿರಿ…

ಟ್ರಂಪ್ ಅಂಕಲ್ ಅಮೇರಿಕಾದ ವೀಸಾ ವಿಷಯದಲ್ಲಿ ಹಲವು ಸುಧಾರಣೆಗಳನ್ನು ತಂದಿದ್ದಾರೆ. ಅವರ ದೇಶವನ್ನು ಕಾಪಾಡಲು ಹಲವು ಮಾರ್ಪಾಡುಗಳನ್ನು ಮಾಡಿದ್ದಾಗಿ ಅನುಮೋದಿಸಿದ್ದಾರೆ, ಇದು ವಲಸಿಗರ ಮೇಲೆ ಭಾರಿ ಪರಿಣಾಮ ಬೀರಿದೆ.

 

 

ಸ್ಟೂಡೆಂಟ್ ವೀಸಾ, ವರ್ಕ್ ಪರ್ಮಿಟ್(ಭಾರತದ ಕಂಪನಿಗಳು ಕಳುಹಿಸಿ ಕೊಡುವ ಅಥವಾ ಅಮೇರಿಕಾ ಕಂಪನಿಗಳು ಕೆಲಸಕ್ಕಾಗೇ ಕರೆಸಿಕೊಳ್ಳುವ ವೀಸಾ) , H-1B, H-2B, L-1/2, H-4, ಟೂರಿಸ್ಟ್ ವೀಸಾ, ಗ್ರೀನ್ ಕಾರ್ಡ್ ಮುಂತಾದ ಹಲವು ಬಗೆಯ ವೀಸಾ ಗಳನ್ನು ಅಮೆರಿಕಾದ ಕಾನ್ಸುಲೇಟ್ ನೀಡುತ್ತದೆ. ಟ್ರಂಪ್ ಸರ್ಕಾರ ಅಸ್ತಿತ್ವಕ್ಕೆ ಬಂದಮೇಲೆ ಈ ವೀಸಾಗಳ ಮೇಲೆ ಹಲವು ನಿರ್ಬಂಧನೆಗಳನ್ನು ಹೇರಿದ್ದು, ಮುಖ್ಯವಾಗಿ ಭಾರತೀಯರಿಗೆ ತೊಂದರೆಯಾಗಿದೆ.

ಸಾಮಾನ್ಯವಾಗಿ ಅಮೇರಿಕಾಕ್ಕೆ ಉನ್ನತ ಶಿಕ್ಷಣ (M.S) ಮಾಡಲು ಹೋದ ಹುಡುಗ / ಹುಡುಗಿಯರು ಸ್ಟೂಡೆಂಟ್ ವೀಸಾದಲ್ಲಿ ತೆರಳಿರುತ್ತಾರೆ. ಅವರಿಗೆ ಕೆಲಸ ಸಿಕ್ಕ ನಂತರ, ಸ್ಟೂಡೆಂಟ್ ವೀಸಾ, ವರ್ಕ್ ಪರ್ಮಿಟ್ ಗೆ ಬದಲಾಗುತ್ತದೆ (ಅಲ್ಲಿನ ಕಂಪನಿ ಅದನ್ನು ಸ್ಪಾನ್ಸರ್ ಮಾಡುತ್ತೆ) ಹಾಗು ಮೂರು ವರ್ಷದ ಕಾಲಾವಧಿಗೆ ಸೀಮಿತವಾಗಿರುತ್ತದೆ. ಆ ಮೂರು ವರ್ಷದ ನಂತರ ಹುಡುಗ / ಹುಡುಗಿ ಅಲ್ಲೇ ತಮ್ಮ ಉದ್ಯೋಗವನ್ನು ಮುಂದುವರೆಸಲು ಇಚ್ಚಿಸುವುದಾದರೆ ಹಚ್ -1 ಬಿ ವೀಸಾಗೆ ಅಪ್ಲಿಕೇಶನ್ ಹಾಕಿ ಕಾಯಬೇಕು. ಅಮೆರಿಕಾದ US Department of Home Security’s (DHS) ಯು ಈಗಾಗಲೇ ಹೆಚ್ -1 ಬಿ ವೀಸಾ ವನ್ನು ಎಲೆಕ್ಟ್ರೋನಿಕ್ ರಿಜಿಸ್ಟ್ರೇಷನ್ ಮಾಡಬೇಕೆಂದು ಮತ್ತು ವರ್ಷಕ್ಕೆ 65,000 ವೀಸಾಗೆ ಸೀಮಿತಗೊಲಿಸಬೇಕೆಂದು ಸರ್ಕಾರಕ್ಕೆ ಸೂಚಿಸಿದೆ. ಹಚ್ -1 ಬಿ ವೀಸಾ ಈಗ ಲಾಟರಿ ಸಿಸ್ಟಂ ಆಗಿದೆ. ಅಮೇರಿಕಾದಲ್ಲೇ ಉನ್ನತ ಶಿಕ್ಷಣ ಮಾಡಿದವರಿಗೂ ಹೆಚ್-1ಬಿ ವೀಸಾ ಸಿಗುವುದು ಖಚಿತವಲ್ಲ. ಹೀಗೆ 6 ವರ್ಷದ ಒಳಗೆ ಗ್ರೀನ್ ಕಾರ್ಡ್ ಗೆ ಆತ/ಆಕೆ ಕೆಲಸ ಮಾಡುವ ಕಂಪನಿ ಸ್ಪಾನ್ಸರ್ ಮಾಡಿದ್ರೆ, ಆಗ ಮಾತ್ರ ಆ ದೇಶದಲ್ಲಿ ಉಳಿಯಲು ಸಾಧ್ಯ!

ಹಚ್-1ಬಿ ಇರುವ ವರ/ವಧು ಮದುವೆಯ ನಂತರ ತಮ್ಮ ಬಾಳ ಸಂಗಾತಿಯನ್ನು ಹಚ್- 4 ವೀಸಾ ದಲ್ಲಿ ಕರೆದು ಕೊಂಡು ಹೋಗುತ್ತಿದ್ದರು. ಹಚ್- 4 ವೀಸಾ ದಲ್ಲಿ ಹೋದ ಸಂಗಾತಿಗೆ ಅಮೇರಿಕಾದಲ್ಲಿ ಕೆಲಸ ಮಾಡುವ ಅವಕಾಶವಿತ್ತು, ಇದಕ್ಕಾಗಿ EAD Employment Authorization Document ಅನ್ನುವ ಪತ್ರ ನೀಡುತ್ತಿದ್ದರು. ಈಗ ಟ್ರಂಪ್ ಸರ್ಕಾರ ತನ್ನ ವೀಸಾ ನೀತಿಯನ್ನು ಬಿಗಿಗೊಳಿಸಿದ್ದು ಹಚ್-4 ವೀಸಾ ದಲ್ಲಿ ಬರುವ ಬಾಳಸಂಗಾತಿ ಕೆಲಸ ಮಾಡಕೂಡದು, ಕೆಲಸ ಮಾಡ ಬೇಕಾದಲ್ಲಿ ಬಾಳಸಂಗಾತಿ ಕೂಡ ಹಚ್-1ಬಿ ವೀಸಾ ಪಡೆಯಬೇಕು ಅನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಮೆರಿಕಾದ ಸಂಸತ್ತಿನಲ್ಲಿ ಕೆಲವು ಸಂಸದರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು ಹಲವು ಬಾರಿ ಅನುಮೋದನೆಗೆ ವಿಳಂಬವಾಗಿದೆ. ಆದರೆ ಈ ಬದಲಾವಣೆ ಅಮೇರಿಕಾಗೆ ಒಳಿತನ್ನು ಮಾಡುತ್ತದೆ ಎಂದು ಹೇಳುವ ಟ್ರಂಪ್ ಸರ್ಕಾರ, ಮತ್ತೆ ಈ ಅನುಮೋದನೆಯನ್ನು ಹಿಂಪಡೆಯುವುದು ಕಷ್ಟವೇ ಸರಿ. ಇದರ ಅರ್ಥ, ಹಚ್-1ಬಿ ವೀಸಾ ಪಡೆದು ಹೋಗುವ ಬಾಳಸಂಗಾತಿಯರು ಹೌಸ್ ವೈಫ್ ಗೃಹಿಣಿ ಯಾಗಲು ಹಿoಜರಿಯುವಂತಿಲ್ಲ. ಇದಕ್ಕೆ ಸಿದ್ಧರಿರಬೇಕು.

ಗ್ರೀನ್ ಕಾರ್ಡ್ ಹೊಂದಿರುವ ವಧು, ವರರು, ಗ್ರೀನ್ ಕಾರ್ಡ್ ಹೊಂದಿರುವವರನ್ನು ಇಲ್ಲ ಗ್ರೀನ್ ಕಾರ್ಡ್ ಅಪ್ಲೈ ಮಾಡಿರುವವರನ್ನೋ ಮದುವೆ ಮಾಡಿಕೊಳ್ಳುವುದು ಉತ್ತಮ. ಗ್ರೀನ್ ಕಾರ್ಡ್ ಹೊಂದಿರುವ ವರ, ಭಾರತಕ್ಕೆ ಬಂದು, ಭಾರತದಲ್ಲೇ ಇರುವ ವಧುವನ್ನು ಮದುವೆ ಆಗಿ, ಅಮೇರಿಕಾಗೆ ಕರೆದುಕೊಂಡು ಹೋಗಲು ಕಷ್ಟ. ಹಾಗಾಗಿ, ಗ್ರೀನ್ ಕಾರ್ಡ್ ಹೊಂದಿರುವ ವಧು, ವರರು ಸಂಬಂಧಪಟ್ಟ ಕಚೇರಿಯಲ್ಲಿ ವಿಚಾರ ಮಾಡಿ ಮುಂದುವರೆಯುವುದು ಒಳಿತು.

 

 

ಗ್ರೀನ್ ಕಾರ್ಡ್ ಪ್ರೊಸೆಸ್ಸಿಂಗ್ ನಲ್ಲಿ ಇರುವ ವರನ ಹೆಂಡತಿಗೆ, ಉದ್ಯೋಗ ಮಾಡುವ ಅವಕಾಶ ಇನ್ನೂ ಇದೆ. ಇದಕ್ಕಾಗಿ EAD Employment Authorization Document ಅನ್ನುವ ಪತ್ರ ನೀಡುತ್ತಿದ್ದಾರೆ.  ಈಗಿರುವ ಸರತಿಯಲ್ಲಿ ಗ್ರೀನ್ ಕಾರ್ಡ್ ಬರುವುದಕ್ಕೆ ಹದಿನೈದು 15 ವರ್ಷ ವಾಗುತ್ತೆ.

ಇನ್ನು ವರ್ಕ್ ಪರ್ಮಿಟ್ ( 3 ವರ್ಷಕ್ಕೆ ಸೀಮಿತ ) ನಲ್ಲಿ ಕೆಲಸ ಮಾಡುತ್ತಿರುವ ಹುಡುಗ / ಹುಡುಗಿಯರಿಗೆ ಒಂದು ಪಕ್ಷ ಹಚ್ -1ಬಿ ವೀಸಾ ಸಿಗದಿದ್ದಲ್ಲಿ ಭಾರತಕ್ಕೆ ವಾಪಾಸ್ ಮರಳಬೇಕಾಗುತ್ತದೆ. ಹಲವು ಹುಡುಗ / ಹುಡುಗಿಯರು ಭಾರತದಲ್ಲಿ ಕೆಲಸಕ್ಕೆ ಸೇರಿ, ತಮ್ಮ ಕಂಪನಿಯಿಂದ ಪ್ರಾಜೆಕ್ಟ್ ಮೇಲೆ ಅಮೆರಿಕಾಕ್ಕೆ ಹೋಗಿರುವವರು ಇದ್ದಾರೆ. ಅಂತವರು ತಮ್ಮ ಪ್ರಾಜೆಕ್ಟ್ ಮುಗಿಯುವವರೆಗೂ ಅಲ್ಲಿ ಇರಬಹುದು ಅಷ್ಟೇ. ಅವರುಗಳು ಅಮೆರಿಕಾದಲ್ಲೇ ಉಳಿಯುವ ಯೋಚನೆ ಇದ್ದರೆ, ಹೊಸ ಉದ್ಯೋಗವನ್ನು ಹುಡುಕಿ, ಪುನಃ ಭಾರತಕ್ಕೆ ಬಂದು ತಮ್ಮ ಹಚ್ -1ಬಿ ವೀಸಾ ಪಡೆದು ಹೋಗಬೇಕು.

ಮದುವೆಯಾದ ಕೆಲವು ದಿನಗಳಲ್ಲಿ ಭಾರತಕ್ಕೆ ವಾಪಾಸ್ ಮರಳುವ ಯೋಚನೆ ಇದ್ದರೆ, ಸಂಗಾತಿಯನ್ನು ಕೆಲವು ದಿನಗಳವರೆಗೆ ಟೂರಿಸ್ಟ್ ವೀಸಾ ದಲ್ಲಿ ಕರೆದೊಯ್ದು, ಆರು ತಿಂಗಳಿಗೊಮ್ಮೆ ತವರಿಗೆ ಕಳಿಸುವ ಯೋಚನೆ ಮಾಡಬಹುದು. ಅದರೆ ಟೂರಿಸ್ಟ್ ವೀಸಾದಲ್ಲಿ ತೆರಳುದವರಿಗೆ ಯಾವುದೇ ಉದ್ಯೋಗ ಅವಕಾಶವಿರುವುದಿಲ್ಲ.

ಅಮೇರಿಕಾದ ವೀಸಾ ನಿರ್ಬಂಧಗಳು ಬದಲಾಗುತ್ತಲೇ ಇವೆ. ಸರಿಯಾದ ಮಾಹಿತಿಯನ್ನು ಪಡೆದು, ಎಲ್ಲಾ ಅಂಶಗಳನ್ನು ಅವಲೋಕಿಸಿ ಮುಂದುವರೆಯುವುದು ಒಳಿತು. ‘ದೂರದ ಬೆಟ್ಟ, ನುಣ್ಣಗೆ’ ಅನ್ನುವ ಗಾದೆಗೆ ನಾವು ಉದಾಹರಣೆ ಆಗುವುದು ಬೇಡ.

                                                                                                                                                                                                                                  ಮೈಸೂರ್ ವಿನ್ಯ

0Shares

You may also like...

1 Response

  1. Shankar V says:

    Super vinay

Leave a Reply

Your email address will not be published. Required fields are marked *