ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡ್ ಅಪ್ಪೋ ಡಿಮ್ಯಾಂಡು…….

ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡ್ ಅಪ್ಪೋ ಡಿಮ್ಯಾಂಡು..ಹೆಣ್ಣು ಕೊಟ್ಟ ಮಾವನಿಗೆ ರಿಮ್ಯಾಂಡ್ ಅಪ್ಪೋ….ರಿಮ್ಯಾಂಡು….

ಟಕ್… 

ಸುಧಾ : ಅಯ್ಯೋ.. ಹಾಳಾದ್ದು ಕರೆಂಟು ಹೋಯಿತು
ವಿಕ್ಕಿ : ಇಲ್ಲಾಮ್ಮ. ಕರೆಂಟು ಇದ್ಯಲ್ಲಾ.
ಸುಧಾ : ಮತ್ತೇ ರೇಡಿಯೋ ಅಫ್ ಆಯ್ತಲ್ಲಾ !!!
ವಿಕ್ಕಿ : ನಾನೇ ಆಫ್ ಮಾಡದೆ.
ಸುಧಾ : ಯಾಕೋ ಅಷ್ಟು ಒಳ್ಳೆ ಹಾಡು ಬರುತ್ತಿತ್ತು.
ವಿಕ್ಕಿ : ಆ…ಒಳ್ಳೆ ಹಾಡೇ….ಯಾವೋನೋ ತಲೆ ಕೆಟ್ಟವನು ಬರೆದಿರಬೇಕು.
ಸುಧಾ : ಯೇ….ಸುಮ್ಮನಿರು ಆದು ಸೂಪರ್ ಹಿಟ್ ಹಾಡು ಕಣೋ…
ವಿಕ್ಕಿ : ತೂ…
ಸುಧಾ : ಯಾಕೋ ಹಾಗಂತೀಯ…ನಿಜವಾಗ್ಲು ಅದು ಸೂಪರ್ ಹಿಟ್ ಹಾಡು ಕಣೋ…
ವಿಕ್ಕಿ : ಆಮ್ಮ ಅದ್ ಯಾವೋನ್ ಬರುದ್ನೊ ಗೊತ್ತಿಲ್ಲ ಆವನು ಹೇಳ್ತಿರೋದು ಮದುವೇ ವಿಚಾರಾ ತಾನೆ
ಸುಧಾ : ಹೌದು.
ವಿಕ್ಕಿ : ಮತ್ತೇ ಗಂಡಸಿಗೆ ಯಂತಾ ಡಿಮ್ಯಾಂಡು???  ಮೊನ್ನೆ ಶಶಾಂಕ್ ಗೆ ಆಯ್ತಲ್ಲಾ
ಸುಧಾ : ಆಯ್ಯೋ…ಅಷ್ಟು ಸಿರಿಯಸ್ ಆಗಿ  ಯೋಚನೆ ಮಾಡ್ತಿದ್ಯಲ್ಲೋ ವಿಕ್ಕಿ
ವಿಕ್ಕಿ : ಮತ್ತಿನ್ನೇನು..
ಸುಧಾ : ಹೌದಲ್ವೋ ರಾಜ, ನಾನು ಈ ಸಾಂಗ್ನ ನಿನ್ನೇ..ಮೊನ್ನೆದು ಅನ್ಕೊತಿದ್ದೆ  ನನ್ ಮದುವೆ ಟೈಮ್ ಹಾಡುಕಣೋ ಆದು.
ವಿಕ್ಕಿ : ಓಹೋ…
ಸುಧಾ : ಕಾಲ ನಿಜವಾಗ್ಲು ಬದಲಾಗಿದೆ ಅನ್ನುಸ್ತಿದೆ ಈಗ..
ವಿಕ್ಕಿ : ನಾನು ದೊಡ್ಡಪ್ಪನ ನೋಡಕೊಂಡು ಬರ್ತಿನಿ.
ಸುಧಾ : ಇರು ವಿಕ್ಕಿ, ಅಡಿಗೆ ಮಾಡ್ತಾ ಇದ್ದಿನಿ.ಅವರಿಗೂ ತೊಗೋಂಡು ಹೋಗ್ವಿಂತೆ
ವಿಕ್ಕಿ : ಆಯ್ತು….ಸರೀ ಅದೇನೋ ಫ್ಲಾಶ್ ಬ್ಯಾಕ್  ಅಂದ್ಯಲ್ಲಾ ಏನದು..
ಸುಧಾ : ಗ್ನಾಪ್ಸುಕೊಂಡ್ರೆ ಬೇಜಾರಾಗುತ್ತೋ.
ವಿಕ್ಕಿ : ಯಾಕಮ್ಮ ಅಳ್ತಿದ್ಯಾ….ಯೇನು ನಿನ್ನ ಫೇವರೇಟ್ ಹೀರೊ ಹಾಡಾ
ಸುಧಾ : ಯೇ…
ವಿಕ್ಕಿ : ಮತ್ತಿನ್ನೇನು..
ಸುಧಾ : ಇಲ್ಲಾ ಕಣೋ. ..25 ವರ್ಷದ ಹಿಂದಿದ್ದ  ಪರಿಸ್ಥಿತಿ  ನೆನ್ಸ್ ಕೊಂಡೇ ಅಷ್ಟೆ…
ವಿಕ್ಕಿ : ನನಗೆ ಹೇಳೋ ಅನ್ತದ್ ಅಲ್ವಾ
ಸುಧಾ : ಹಾಗೇನಿಲ್ಲವೋ ಮಗನೇ… ಈ ಹಾಡು ನಮ್ಮ ಕಾಲಕ್ಕೆ ಸರಿಯಾಗೇ ಇತ್ತು, ನನ್ನ ಪರಿಸ್ಥಿತಿನೂ ಹಾಗೇ ಇತ್ತು.
ವಿಕ್ಕಿ : ಓ ಶಶಾಂಕ್ಯಾಕೋ ಅಲ್ಲೇ ನಿಂತಿದ್ಯಾ,  ಯಾವಾಗ ಬಂದೆ..
ಶಶಾಂಕ್ : ಹಾ…ನಿಮ್ಮ ಮಾತು ಶುರುವಾದಾಗ.
ಸುಧಾ : ಕೂತ್ಕಳೋ…..ಕಾಫಿ ಕೊಡ್ಲೇನೋ
ಶಶಂಕ್ : ಬೇಡಾ…ಅಪ್ಪಂಗೆ ಊಟ ತಗೋಂಡ್ ಹೋಗಣ ಅಂತ ಬಂದೆ ಚಿಕ್ಕಮ್ಮ .. ಮುಂದುವರಿಸಿ..
ಸುಧಾ : ಹೂ….ಆ ಪರಿಸ್ಥಿತಿ ಯಾಕೆ. ಯಾವ ಹುಡುಗರು ನನ್ನನ್ನ ಒಪ್ಪುತ್ತಿರಲಿಲ್ಲಾ..ನನ್ನದು ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು.. ಫೋಟೋ, ಜಾತಕ ಹಿಡ್ಕೋಂಡು ನಮ್ಮಪ್ಪ ಅದೆಷ್ಟು ಚಪ್ಪಲಿ ಸವ್ಸುದ್ರೋ. ಆವರು-ಇವರು ಹೇಳಿದ್ದು ಅಂತ ಕೆಲವರು ನೋಡಕ್ಕ ಬಂದ್ರು,
ಸುಧಾ : ಹುಡುಗಿ ಬಣ್ಣ ಇಲ್ಲದಿದ್ರು ಲಕ್ಷಣವಾಗಿದಾಳೇ ಅಂತ ಕೆಲವರು ಒಪ್ಪಿದ್ರು, ಆಮೇಲೆ ವರದಕ್ಷಿಣೆ ಅಂತ ಯೇನು ಕೊಡ್ತಿರ?, ಸ್ಕೂಟರ್, ಕಾರು, ಮನೆ, ಸೈಟು ನಾಚಿಕೆ ಇಲ್ದೇ ಕೇಳೋರು…
ಸುಧಾ : ವರೋಪಚಾರಕ್ಕೆ , ಮದುವೆಗೆ ಅಂತ ಅಪ್ಪ ದುಡ್ಡಿಟ್ಟಿದ್ರು..ವರದಕ್ಷಿಣೆ ಕೊಡೊ ಪರಿಸ್ಥಿತಿ  ಇರ್ಲಿಲ್ಲ. ಅಪ್ಪ-ಅಮ್ಮ ಆಗ ಅದೆಷ್ಟು ಕಣ್ಣೆರಿಟ್ಟರೋ..
ಶಶಾಂಕ್ : ಚಿಕ್ಕಮ್ಮ.. ಅದನ್ನು ನೆನೆಸ್ಕೋಂಡು ಇಗ್ಯಾಕೆ ಅಳ್ತಿರಾ..
ಸುಧಾ : ನಾನು.. ಮದುವೆನೇ ಆಗಲ್ಲ ಅಂತ ಡಿಸೈಡ್ ಮಾಡಿದ್ದೆ. ಅಪ್ಪ, ಅಮ್ಮನ ಹತ್ರಾ ಮಾತೂ ಬಿಟ್ಟಿದ್ದೆ….
ವಿಕ್ಕಿ : ಆಮೇಲೆ
ಸುಧಾ : ಶಾಂತತ್ತೆ ಕೋನೆಗೆ ಕಾಡಿ-ಬೇಡಿ ನಿಮ್ಮಪ್ಪನ್ನ ನೋಡಕ್ಕೆ ಒಪ್ಪಿಸಿದ್ರು.
ಶಶಾಂಕ : ಚಕ್ಕಮ್ಮನಿಮ್ಗೆ ಅಳು ಬಂದ್ರೆ ನಂಗ್ ನಗೂ ಬರ್ತಾ ಇದೆ.. ಈಗ ನಾನು ಆದೇ ಪರಿಸ್ತಿತಿಲ್ಲಿದ್ದಿನಿ.    ಮೊನ್ನೆ  ಆ ಹುಡ್ಗಿನ್ ನೋಡಿದ್ಮೇಲೆ ನಾನು ಮದುವೆ ಬೇಡ ಅನ್ನೋ ಹಾಗಾಗ್ತಿದೆ
ಸುಧಾ : ಹೌದು ಸರಿಯಾದ ಕಾರಣಗಳಿಲ್ದೇ ರಿಜಕ್ಟ್ ಆದ್ರೆ ಯಾರಿಗಾದ್ರು ಹಾಗೆ ಆಗೋದು.
ಸುಧಾ : ಹೋದವಾರ ಚಂದ್ರಿಕಾ ಆಂಟಿ ಸಿಕ್ಕಿದ್ರು ಅವರತ್ರಾ ನಿನಗೆ ಒಂದು ಹುಡುಗಿ ನೋಡಿ ಅಂತ ಹೇಳ್ದೆ. ತುಂಬಾ ಬೇಜಾರ್ ಮಾಡ್ಕೋಂಡ್ರು ನಾನು ಈ ಕೆಲಸ ಬಿಟ್ಟಿದೇನೇ. ಈ ಡಿಮ್ಯಾಂಡ್ ಗಳು ನೋಡಿದ್ರೆ  ಅಸಹ್ಯ  ಆಗುತ್ತೆ ಸುಧಾ, ಯಾರಿಗೂ ತಿಳುವಳಿಕೆನೂ ಹೇಳೋಹಾಗಿಲ್ಲ.  ನಿನ್ಗೆ ಮದುವೆ ಮಾಡ್ಸ ಬೇಕಾದ್ರೆ ಹೇಗಿತ್ತು..ಈಗ ಹೇಗಿದೇ.. ಅಂದ್ರು.
ವಿಕ್ಕಿ : ಅಮ್ಮ…ಶಶಾಂಕ್ನ ರಿಜ್ಕಟ್ ಮಾಡೋಕ್ಕೆ ಅವನಿಗೆ ಯೇನು ಕಮ್ಮಿ…ಅವಳು ಸರಿಯಾಗಿ ಮಾತಾಡ್ಲಿಲ್ವಾ ಅಣ್ಣಾ.
ಸುಧಾ : ಹುಡುಗಿ ಚನ್ನಾಗಿದ್ಲಂತೆ….
ಶಶಾಂಕ್ : ಸರಿಯಾಗಿಯೇ  ಮಾತಾಡ್ತಿದ್ಲು , ನನ್ನ ಡೈಲಿ ರೊಟಿನ್ ಯೇನು ಅಂತ ಕೇಳಿದ್ಲು..ಮಾಮೂಲಿ ಬೆಳಗ್ಗೆ ಯೋಗ, ಸ್ನಾನ, ಸಂಧ್ಯಾವ್ನೆ, ತಿಂಡಿ..ಆಫೀಸು ಅಂದೆ ತಕ್ಷಣ ಸೀರಿಯಸ್ಸಾಗಿ “ನೀವು ತುಂಬಾ ಅರ್ಥೊಡೆಕ್ಸ್  ಅನಿಸುತ್ತೆ ಅಂದ್ಲು”,  ಆಮೇಲೆ ಹೆಚ್ಚಗೆ ಮಾತೇ ಇಲ್ಲಾ..

ಸುಧಾ : ಆಯ್ಯೋ..ರಾಮ.. ಯೋಗ, ಸಂಧ್ಯಾವಂದ್ನೆನೇ ಅರ್ಥೊಡೆಕ್ಸ್  ಆಯ್ತಾ???

ವಿಕ್ಕಿ :  ಹ:..ಹ: ….ಯೋಗ ಅರ್ಥೊಡೆಕ್ಸ್,  ಜಾಗಿಂಗ್ ಮಾಡ್ರೇಟ್, ಜಿಮ್ ಮಾಡ್ರನ್ ಅನ್ಸುತ್ತೆ….
ಸುಧಾ : ನಿನ್ನ ಜಡೇ ಉದ್ದ ಇಲ್ಲಾ, ಮೂಗು ಸಲ್ಪಾ ಸೊಟ್ಟಗಿದೆ ಅಂತಾ ನನ್ನ ರಜೆಕ್ಟ್ ಮಾಡಿದ್ರು…ಈಗ ಇನ್ನೊಂತರ.
ಸುಧಾ : ಸಾಯಲಿ ಬಿಡು ಆದ್ರೆ ಭಾವ ಯಾಕೆ ರೈಸ್ ಆದ್ರು..
ಶಶಾಂಕ್ : ಆ ಯಪ್ಪ ನಿಮ್ಮನೆ ನಿಮ್ಮ ಹೆಸರಲ್ಲಿದ್ಯೋ ಮಗನ ಹೆಸರಲ್ಲಿದ್ಯೋ ಅಂತ ಕೇಳಿದ್ರಂತೆ..
ವಿಕ್ಕಿ : ಓ.ಪ್ಲಾನ್.. ಜೋರಾಗೇ ಇದೆ..
ಸುಧಾ : ಶಶಾಂಕ್, ನಿಮ್ಮ ಆಫೀಸ್ ನಲ್ಲೇ ಚನ್ನಾಗಿರೊ ಹುಡುಗಿಯರು ಇದ್ದಾರಂತೆ, ಯಾರನ್ನಾದರು ನೋಡ್ಕೋ??
ಶಶಾಂಕ್ : ಅಯ್ಯೋ..ನಮಸ್ಕಾರ., ಮದುವೆಯಾಗದಿದ್ರೂ ಪರವಾಗಿಲ್ಲ. ಆವರುಗಳು ನೋಡುವ ರೇಂಜೇ ಬೇರೆ.. ಎಲ್ಲಾ ಹಣ, ಕೆರಿಯರ್ಗಳ ಹಿಂದೆ ಲಗಾಮ ಕಟ್ಟಿಕೊಂಡಿರುವರೇ.
ಸುಧಾ : ಹಾಗಾದರೆ ಈ ಬೆಂಗಳೂರು ಹುಡುಗಿಯರ ಬಿಟ್ಟು ಯಾವುದಾದರು ಹಳ್ಳಿ ಕಡೆ ಹುಡುಕಬೇಕಷ್ಟೇ
ಶಶಾಂಕ್ : ಚಿಕ್ಕಮ್ಮ ಬಿಡ್ತು ಅನ್ನಿ
ಸುಧಾ : ಯಾಕೋ
ಶಶಾಂಕ್ : ನನ್ನ ಕೊಲೀಗ್ ವಿನಯ್ ಗೊತ್ತಲ್ಲಾ ಚಿಕ್ಕಮ್ಮಾ, ಅವರ ಪರಿಚಯದ ಯಾವುದೊ ಹುಡುಗಿ ಹಳ್ಳಿ ಕಡೆ ಇದೆ, ಒಳ್ಳೆ ಜನ, ಆದರೆ ತುಂಬಾ ಅನುಕೂಲಸ್ಥರಲ್ಲ ಅಂತ ಯಾರೋ ಪ್ರಪೋಸ್ ಮಾಡಿದರಂತೆ.
ಸುಧಾ : ಹೂ..
ಶಶಾಂಕ್ : ಹುಡುಗಿ ಬಿ.ಎ- ಡುಮ್ಕಿ, ಆದರೂ ನೋಡೊಕೆ ಪರವಾಗಿಲ್ಲಾ ಅಂತ ಇವನೂ ಒಪ್ಪಿದ್ದಾ.
ಸುಧಾ : ವಿನಯ್ಗೆ ಎನೋ ಕಮ್ಮಿ. ಜನ ಒಳ್ಳೆಯವರು ಅಂದ್ರೆ ಸಾಕುಬಿಡು..
ಶಶಾಂಕ್ : ಹಃ..ಹಃ..ವಿನಯ್ ಅಪ್ಪಾ, ಅಮ್ಮ ಮದುವೆ ಕರ್ಚು ತಾವೇ ಮಾಡೋಕ್ಕು ರೆಡೀ ಇದ್ರು.
ಸುಧಾ : ಮತ್ತೆನಾಯ್ತು..
ಶಶಾಂಕ್ : ಪ್ರಪೋಸ್ ಮಾಡಿದವರು ಹುಡುಗಿ ಮನೆಯಲ್ಲಿ ಕೇಳಿದ್ರಂತೆ. ವಿನಯ್ನ ರಿಜೆಕ್ಟ್ ಮಾಡಿ, ಬೇರೇ ಒಳ್ಳೆ ಸಂಬಂಧ ಇದ್ರೆ ತಿಳಿಸಿ ಅಂದ್ರಂತೆ.
ಸುಧಾ : ಇನ್ನೆಂತಾ ಸಂಬಂಧ ಬೇಕಂತೆ ಅವರಿಗೆ
ಶಶಾಂಕ್ : ಹುಡುಗಿ ಮನೆಯವರ ಡಿಮ್ಯಾಂಡ ಕೇಳಿದ್ರೆ ಮೂರ್ಚೆ  ಹೋಗ್ತಿರಾ.  ಹುಡುಗ ಬಿ.ಇ ಮಾಡಿರ್ ಬೇಕಂತೆ, ಬೆಂಗಳುರಲ್ಲಿ ಸಾಫ್ಟ್ವೇರ್ ಇಂಜಿನಿಯರೇ ಆಗಿರ್ಬೇಕಂತೆ, ಸ್ವಂತ ಮನೆ ಇರಬೇಕು, ಒಂದು ಲಕ್ಷನಾದ್ರು ಸಂಬಳವಿಲ್ಲದಿದ್ರೆ ಬೆಂಗಳೂರಲ್ಲಿ ಜೀವನ ಮಾಡೋಕೆ ಆಗುತ್ತಾ ಅಂದ್ರಂತೆ..
ಸುಧಾ : ಕರ್ಮ ಕಾಂಡ.
ವಿಕ್ಕಿ : ಆ ಡೈರಕ್ಟರ್ಗೆ ಹೇಳಿ ಹಾಡು ಸರೀಮಾಡಿಸಮ್ಮ…
ಸುಧಾ : ಯೇನು ಕಾಲಾ ಬಂತೋ.. ನೀನ್ ಹೇಳೊದು ಸರೀನೇ..
ವಿಕ್ಕಿ : ಹೂ….ಆ ಕಾಲ ಹೋಯ್ತಮ್ಮ..ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡು ಇಲ್ಲಾ, ಹೆಣ್ಣು ಹೊತ್ತ ಮಾವಂಗೆ ರಿಮ್ಯಾಂಡು ಇಲ್ಲಾ. ಈಗ ಹೆಣ್ಮಕ್ಳೆ ಸ್ಟ್ರಾಂಗ್ ಗುರು….

 

0Shares

You may also like...

Leave a Reply

Your email address will not be published. Required fields are marked *