ಫೇಸ್ ಬುಕ್ ನಲ್ಲಿ ವಧು-ವರರನ್ನು ಹುಡುಕುವವರಿಗೆ ಕೆಲವು ಸಲಹೆಗಳು.
ಮಿತ್ರರೇ, ಫೇಸ್ ಬುಕ್ ನಲ್ಲಿ ವಧು-ವರಾನ್ವೇಷಣೆ ಮಾಡುವುದು ಸುಲಭ ಹಾಗು ಉಚಿತ. ಮದುವೆಯ ವಿಚಾರವಾಗಿ ಇಲ್ಲಿ ಹಲವು ಗ್ರೂಪ್ ಗಳು ಚಾಲ್ತಿಯಲ್ಲಿ ಇವೆ ಹಾಗು ಉಚಿತ ಮಾಹಿತಿಯನ್ನು ನೀಡಲು ಸಹಾಯಕವಾಗಿದೆ. ಇಂತಹಾ ಸೋಶಿಯಲ್ ಮೀಡಿಯಾಗಳ ವಿಸ್ತಾರ, ವೇಗ ಹಾಗು ಶಕ್ತಿ ಅದ್ಬುತ. ತ್ವರಿತವಾದ ಫೀಡ್ ಬ್ಯಾಕ್, ಟೀಕೆ, ಟಿಪ್ಪಣಿಗಳು, ಉಲ್ಲೇಖಗಳು ಅಸಾಮಾನ್ಯವಾದದ್ದು.
ಆದರೆ ಈ ಇಂಟರ್ನೆಟ್ ಸಾಮಾಜಿಕ ಜಾಲತಾಣಗಳಲ್ಲಿ ನಮಗೆ ಎಷ್ಟು ಉಪಯೋಗವಿದೆಯೋ ಅಷ್ಟೇ ಅನಾನುಕೂಲಗಳೂ ಇವೆ. ಫೇಸ್ ಬುಕ್ ನಲ್ಲಿ ವಧು ವರರನ್ನು ಹುಡುಕಲು ಕೆಲವರು ಮುಜುಗರ ತೋರಿದರೆ ಇನ್ನು ಕೆಲವರು ಅಜಾಗರೂಕರಾಗಿರುತ್ತಾರೆ. ಸ್ನೇಹಿತರೊಡನೆ ಮನಸ್ತಾಪ, ದಾಂಪತ್ಯದಲ್ಲಿ ವಿರಸ ಹಾಗು ಹಲವು ಆತ್ಮಹತ್ಯೆಯ ಕಥೆಗಳಿಗೆ ಇದು ನಾಂದಿಯಾಗಿವೆ. ಈ ಜಾಲತಾಣದಲ್ಲಿ ಸಂಬಂಧವನ್ನು ಕಟ್ಟುವಾಗ ನಿಮ್ಮ ಎಚ್ಚರಿಕೆಯಲ್ಲಿ ನೀವು ಇರುವುದು ಸೂಕ್ತ. ಫೇಸ್ ಬುಕ್ ನಲ್ಲಿ ಗಂಡು-ಹೆಣ್ಣು ಹುಡುಕುವವರಿಗೆ ಕೆಲವು ಸಲಹೆಗಳು….
೧. ನಿಮ್ಮ ಫೋನ್ ನಂಬರ್ ಹಾಗು ಇ-ಮೇಲ್ ಅಡ್ರೆಸ್ ಗಳನ್ನು ಎಲ್ಲರಿಗೂ ಕಾಣುವಂತೆ ಪೋಸ್ಟ್ ಅಥವ ಕಾಮೆಂಟ್ ಮಾಡುವುದು ಸೂಕ್ತವಲ್ಲ. ಅನಾವಶ್ಯಕ ಕರೆಗಳಿಗೆ ಎಡೆಮಾಡಿಕೊಟ್ಟ ಹಾಗೆ ಆಗುತ್ತದೆ. ನಿಮಗೆ ಯಾರಿಗದರೂ ಫೋನ್ ನಂಬರ್ / ಇಮೇಲ್ ಕೊಡಬೇಕೆನ್ನಿಸಿದರೆ ಅವರ ಇನ್ಬಾಕ್ಸ್ ನಲ್ಲಿ ಮೆಸೇಜ್ ಮಾಡಿ (ನಿಮ್ಮ ಇನ್ಬಾಕ್ಸ್ ಚೆಕ್ ಮಾಡಿ ಅಂತ ಕಾಮೆಂಟ್ ಮಾಡಬಹುದು).
೨. ಪ್ರೊಫೈಲ್ ನಲ್ಲಿರುವ ನಿಮ್ಮ ಬಗ್ಗೆ ಮಾಹಿತಿಗಳು, ನಿಮ್ಮ ಫೇಸ್ ಬುಕ್ ಫ್ರೆಂಡ್ಸ್, ನಿಮ್ಮ ಫೋಟೋ, ನೀವು ಲೈಕ್ ಹಾಗು ಶೇರ್ ಮಾಡುವ ಪೋಸ್ಟ್ ಗಳನ್ನು ಮತ್ತು ಕಾಮೆಂಟ್ ಗಳನ್ನೂ ಜಾಲಾಡುತ್ತಾರೆ. ಇದರಿಂದ ನಿಮ್ಮ ಬಗ್ಗೆ ಸಾಕಷ್ಟು ಮಾಹಿತಿಗಳು ಬೇರೆಯವರಿಗೆ ಒದಗುತ್ತದೆ. ಆದ್ದರಿಂದ ಸಾಧ್ಯವಾದಷ್ಟು ವಿವಾಹ ವಿಚಾರಕ್ಕಾಗಿಯೇ ಬೇರೆ ಅಕೌಂಟ್ ರಿಜಿಸ್ಟರ್ ಮಾಡಿ ಉಪಯೋಗಿಸಿ.
೩. ಲೈಕ್ ನೊಂದಿಗೆ ಸಂಬಂಧಗಳ ಕಟ್ಟುವ ಕನಸು ಕಾಣಬೇಡಿ. ಸಮಸ್ಯೆಗಳೂ ಇಲ್ಲೇ ಶುರುವಾಗುವುದು. ಪ್ರಥಮ ಮಾಹಿತಿ ಮಾಧ್ಯಮವಾಗಿ ಮಾತ್ರ ಉಪಯೋಗಿಸಿ, ನಿಮಗೆ ಸೂಕ್ತವೆನ್ನಿಸಿದರೆ ಹೆಚ್ಚಿನ ವಿಷಯಗಳನ್ನು ಇನ್ಬಾಕ್ಸ್ ನಿಂದ ವಿನಿಮಯ ಮಾಡಿಕೊಳ್ಳಿ.
೪. ವಯಸ್ಸು, ಎತ್ತರ, ವಿದ್ಯಾರ್ಹತೆ, ಗೋತ್ರ, ನಕ್ಷತ್ರ, ಹುಡುಗ ಅಥವಾ ಹುಡುಗಿ ಕೆಲಸ ಮಾಡುವ ಊರು, ಉದ್ಯೋಗ (ಸೀಮಿತವಾದ ಮಾಹಿತಿ) ಹಾಗು ನಿಮ್ಮ ಅಪೇಕ್ಷಾ ವಿಚಾರಗಳನ್ನು ಮಾತ್ರ ಪೋಸ್ಟ್ ಮಾಡುವುದು ಉತ್ತಮ. ವರ ಹಾಗು ಕನ್ಯೆಯರ ಹೆಸರು, ಉದ್ಯೋಗ ಮಾಡುತ್ತಿರುವ ಕಂಪನಿಯ ಹೆಸರು ಹಾಕಬೇಡಿ. ಫೋಟೋ ಹಾಕುವುದು ಕೆಲವೊಮ್ಮೆ ಅಪಾಯವಾದೀತು.
೫. ಫೇಸ್ ಬುಕ್ ಅಥವಾ ಇನ್ನಾವುದೇ ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದವರನ್ನು ಒಂಟಿಯಾಗಿ ಮೊದಲಬಾರಿ ಭೇಟಿಯಾಗದಿರಿ. ಭೇಟಿಯ ಸ್ಥಳ ಜನಸಂದಣಿ ಇರುವ ಜಾಗಗಳಾಗಿರುವುದು ಅವಶ್ಯಕ.
೬. ಯಾವುದೇ ಸಂಬಂಧಗಳು ಗಟ್ಟಿಯಾಗಬೇಕಾದರೆ ಪರಸ್ಪರ ವಿಶ್ವಾಸ ಮುಖ್ಯ. ಆ ವಿಶ್ವಾಸ ಗಳಿಸುವುದು ಹಾಗೂ ಅದರ ಭದ್ರತೆಗೆ ನೀವೇ ಜವಾಬ್ದಾರರು. ಅನುಮಾನಗಳಿಗೆ ಆಸ್ಪದ ಮಾಡಿಕೊಳ್ಳಬೇಡಿ ಹಾಗೂ ನಿಮ್ಮ ಅನುಮಾನಗಳನ್ನು ಮರೆಮಾಚಬೇಡಿ. ಫೇಸ್ ಬುಕ್ ಅಥವಾ ಗ್ರೂಪ್ ಅಡ್ಮಿನ್ ದೂಷಿಸಿ ಯಾವ ಪ್ರಯೋಜನವೂ ಆಗುವುದಿಲ್ಲ.
೭. “An Known devil is better than an unknown Angel” – ಸೋಶಿಯಲ್ ಮೀಡಿಯಾದಲ್ಲಿ ಸಿಗುವ ಎಲ್ಲಾ ಮಾಹಿತಿಗಳ ವಿಶ್ವಾಸಾರ್ಹವಲ್ಲ. ಇದರ ದೃಢೀಕರಣ ನಿಮ್ಮದಾಗಿರುತ್ತದೆ. ನಿಮಗೆ ವೈಯಕ್ತಿಕವಾಗಿ ಪರಿಚಯದವರ ಸಂಬಂಧ ಬೆಳೆಸುವುದು ಯಾವಾಗಲೂ ಒಳ್ಳೆಯದು. ಅದಕ್ಕೆ ಮುಖ್ಯವಾಗಿ ನಿಮ್ಮ ವೈಯಕ್ತಿಕ ನೆಟ್ವರ್ಕ್ ಚೆನ್ನಾಗಿ ಇರಬೇಕು. ಮಿತ್ರರು ಹಾಗೂ ಸಂಬಂಧಿಕರೊಡನೆ ಒಳ್ಳೆಯ ಬಂಧನವನ್ನು ಬೆಳೆಸಿರಬೇಕು.
೮. ಪೂರ್ಣಮಾಹಿತಿಗಳನ್ನು ಫೇಸ್ ಬುಕ್ ಅಥವಾ ಇನ್ನಾವ ಸೋಶಿಯಲ್ ಮೀಡಿಯಾದಲ್ಲಿ ಗ್ರೂಪ್ ಗಳಲ್ಲಿ ಹಾಕಬೇಡಿ. ಈ ಗ್ರೂಪ್ ಗಳಲ್ಲಿ ಬ್ರೋಕರ್ ಗಳು, ದಲ್ಲಾಳಿಗಳು ಇರುವ ಸಾಧ್ಯತೆಗಳು ಹೆಚ್ಚು. ನಿಮ್ಮ ಪ್ರೊಫೈಲ್ ಗಳು ನಿಮ್ಮ ಹಿಡಿತದಲ್ಲಿ ಇರುವುದಿಲ್ಲ ಹಾಗು ಅದು ಶೇರ್ ಆಗುವ ಹಾದಿ ನಿಮಗೆ ತಿಳಿಯಲು ಸಾಧ್ಯವಿಲ್ಲ. ಗ್ರೂಪ್ ಅಡ್ಮಿನ್ ಗಳೊಂದಿಗೆ ವೈಯಕ್ತಿಕವಾಗಿ ಸಂಪರ್ಕದಲ್ಲಿರುವುದು ಒಳ್ಳೆಯದು, ಕೆಲವು ವಿಚಾರಗಳು ಅವರಿಂದ ಸಿಗುವ ಸಾಧ್ಯತೆಗಳಿರುತ್ತವೆ.
೯. ನಿಮಗೆ ಸಂಪರ್ಕವಿಲ್ಲದವರ ಪ್ರೊಫೈಲ್ ಗಳನ್ನೂ ಖಂಡಿತವಾಗಿ ಪೋಸ್ಟ್ / ಫಾರ್ವರ್ಡ್ ಮಾಡಬೇಡಿ, ವಧು-ವರಾನ್ವೇಷಣೆಯ ಗ್ರೂಪ್ ಉಪಯುಕ್ತವೆನ್ನಿಸಿದರೆ ಅದರ ಬಗ್ಗೆ ಅನುಕೂಲವಾಗುವವರಿಗೆ ಮಾಹಿತಿ ನೀಡಿ.
೧೦. ನೆನಪಿರಲಿ….ಕೊನೆಯದಾದರು ಬಹುಮುಖ್ಯ, ನೀವು ಯಾವ ಯಾವ ಗ್ರೂಪ್ ಗಳಲ್ಲಿ ಪೋಸ್ಟ್ ಮಾಡಿದ್ದೀರೆಂದು ನಿಮ್ಮಲ್ಲಿ ಮಾಹಿತಿ ಇರಬೇಕು. ನಿಮಗೆ ಮದುವೆ ನಿಶ್ಚಿತವಾದಲ್ಲಿ, ನಿಮ್ಮ ಪೋಸ್ಟ್ಅನ್ನು ಆ ಗ್ರೂಪ್ ಗಳಿಂದ ತೆಗೆಯಬೇಕು (ಕೆಲವೊಮ್ಮೆ ಅಡ್ಮಿನ್ ಸಹಾಯಪಡೆದು ಮಾಡಬೇಕಾಗುತ್ತದೆ).
ಒಳ್ಳೆಯ ಗುಣ ಮನಸ್ಸಿನ ಆಸ್ತಿ, ಒಳ್ಳೆಯ ಪ್ರೀತಿ ಹೃದಯದ ಆಸ್ತಿ, ಒಳ್ಳೆಯ ಸಂಬಂಧ ಜೀವನದ ಆಸ್ತಿ.
ಶುಭವಾಗಲಿ
ಆನುರಾಗ ಮ್ಯಾಟ್ರಿಮೊನಿ ಯಲ್ಲಿ ರಿಜಿಸ್ಟರ್ ಮಾಡಲು ಇಲ್ಲಿ ಕ್ಲಿಕ್ಕ್ ಮಾಡಿ
1 Response
[…] 10 Tips for Matrimony Searches on Facebook. […]