ವಧು ವರನ್ವೇಷಣೆಗೆ ಸಲಹೆಗಳು – ಸಲಹೆ ೧
ಬಂಧುಗಳೇ,
ಬ್ರಾಹ್ಮಣ ಸಮುದಾಯದಲ್ಲಿ ವಧು ವರನ್ವೆಷಣೆಯ ಒಂದು ವಿಚಿತ್ರ ಘಟ್ಟವನ್ನು ತಲುಪಿದೆ. ಹುಡುಗ ಹಾಗು ಹುಡುಗಿಯರ ಸಂಖ್ಯೆಯಲ್ಲಿ ಸಮಾನತೆ ಒಂದು ವಯಸ್ಸುನಲ್ಲಿ ಇದ್ದರೂ, ವಿದ್ಯಾರ್ಹತೆ ಹಾಗು ಉದ್ಯೋಗದಲ್ಲಿ ಸಮಾನತೆ ಕಾಣದೆ ಏರುಪೇರಾಗಿದೆ.
ವಧು ವರನ್ವೆಷಣೆ ಮಾಡುತ್ತಿರುವ ಪೋಷಕರಿಗೆ, ಹುಡುಗರಿಗೆ ಹಾಗು ಹುಡುಗಿಯರಿಗೆ ಕೆಲವು ಸಲಹೆಗಳನ್ನು ಮಾಡುವುದರೊಂದಿಗೆ ಸಾಧ್ಯವಾದ ಮಟ್ಟಿಗೆ ಸಮಾಜದಲ್ಲಿ ಸುಧಾರಣೆಯನ್ನು ಮಾಡಲು ನಮ್ಮಿಂದ ಒಂದು ಚಿಕ್ಕ ಪ್ರಯತ್ನ. ಯಾವುದೇ ಭಿನ್ನಾಭಿಪ್ರಾಯ ಯಾರೊಂದಿಗೂ ಸಮಂಜಸವಲ್ಲವೆಂಬುದು ನಮ್ಮ ಸಾಮಾನ್ಯ ಜ್ಞಾನ. ನಿಮ್ಮ ಸಲಹೆಗಳು ಹಾಗು ಅನಿಸಿಕೆಗಳನ್ನು ದಯಮಾಡಿ ನಮಗೆ ಇಮೇಲ್ ಮೂಲಕ ತಿಳಿಸಿ. ಸೂಕ್ತವದವುಗಳನ್ನು ಪ್ರಕಟಿಸುತ್ತೇವೆ. ಸಮುದಾಯಕ್ಕೆ ಒಳಿತನ್ನು ಮಾಡಲು ಒಂದು ಅವಕಾಶ ಕೋರುತ್ತೇವೆ.
ಸಲಹೆ 1 (ಪೋಷಕರಿಗೆ)
ವಧು ವರರನ್ನು ಮದುವೆಗೆ ಒಪ್ಪಿಸುವುದು
ಮಹನೀಯರೇ,
“ಮದುವೆ ಏಕಾಗಬೇಕು“, “ಮದುವೆ ಆಗಲೇಬೇಕಾ“, “ನನಗೆ ಈಗಲೇ ಮದುವೆ ಬೇಡ” ಎನ್ನುವುದು ಹೆಚ್ಚು ಕಮ್ಮಿ ಎಲ್ಲರ ಮನೆಯಲ್ಲೂ ವಧು / ವರರಿಂದ ಕೇಳಿ ಬರುವ ಅರ್ಭಟ. ಇಂದು ಮದುವೆಯು ವಿಳಂಬವಾಗುತ್ತಿರುವುದು ಪ್ರತಿಯೊಬ್ಬ ಪೋಷಕರಿಗೂ ತಿಳಿದಿರುವ ವಿಷಯ.
ಒಂದು ವಯಸ್ಸಿನಲ್ಲಿ ಹೆಣ್ಣು ಹಾಗು ಗಂಡಿಗೆ ಸಂಗತಿ ಬೇಕೆನ್ನಿಸುವುದು ಸಹಜ. ಆದರೆ ಇಂದಿನ ಪೀಳಿಗೆಯಲ್ಲಿ ಮದುವೆಯೇ ಇದಕ್ಕೆ ದಾರಿ ಎನ್ನುವ ಅಭಿಪ್ರಾಯವಿಲ್ಲ. ಸಂಪ್ರದಯಿಕವಾಗಿ ಮದುವೆ ಮಾಡಿಕೊಂಡು ಜೀವನ ಪೂರ್ತಿ ಹೇಣಗಬೇಕೆ ಎಂಬ ಪ್ರಶ್ನೆ ಹಲವು ಯುವಕ -ಯುವತಿಯರದ್ದಾಗಿದೆ. ಪೋಷಕರುಗಳು ತಮ್ಮ ಮಕ್ಕಳ ಸಂಸಾರವನ್ನು ಹೂಡಿಸಿ ನೆಮ್ಮದಿಯ ಉಸಿರು ಬಿಡುವ ದಿನ ಕನಸಾಗಿ ಉಳಿಯುತ್ತಿದೆ.
ಇಂತಹ ಸಂಧಿಗ್ದ ಪರಿಸ್ಥಿತಿಯನ್ನು ಎದುರಿಸುತ್ತಿರುವ ನಮ್ಮ ಸಮುದಾಯದ ಪೋಷಕರು, ಹಲವು ತಪ್ಪುಗಳೊಂದಿಗೆ ಮಕ್ಕಳ “ಮದುವೆ” ಮಾಡುವ ಹೆಜ್ಜೆಯನ್ನು ಹಾಕುತ್ತಿದ್ದಾರೆ.
ಪೋಷಕರೇ,
೧. “ನಿಮ್ಮ ಅಪ್ಪ-ಅಮ್ಮ ನಿನಗೆ ಹೆಣ್ಣು ನೋಡಕ್ಕೆ ಹೇಳಿದ್ದರೆ”, “ಈ ವರ್ಷ ಇವಳಿಗೂ ಮದುವೆ ಮಾಡಬೇಕು”, ” ಶಾಸ್ತ್ರಿಗಳು ಇವನ ಮದುವೆ ಇನ್ನು ಆರು ತಿಂಗಳಲ್ಲೇ ಮಾಡಬೇಕೆಂದು ಹೇಳಿದ್ದಾರೆ” … ಇಂತಹ ಇನ್ ಡೈರೆಕ್ಟ್ ಮಾತುಗಳಿಂದ ನಿಮ್ಮ ಮಕ್ಕಳನ್ನು ಮದುವೆಗೆ ಒಪಿಸಿದ್ದಿವಿ ಎಂದು ತಿಳಿಯಬೇಡಿ.
೨. ನಿಮ್ಮ ಮಗ / ಮಗಳನ್ನು ಮದುವೆ ಮಾಡಿಕೊಳ್ಳುವಂತೆ ಒಪ್ಪಿಸಿ, ನಂತರ ಹೆಣ್ಣು / ಗಂಡು ಹುಡುಕಲು ಸಾಗುವುದೇ ಸೂಕ್ತ. ಮದುವೆಯ ಪ್ರಸ್ತಾಪ ಮಾಡುವ ಮೊದಲು ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಿ. ಹೆಚ್ಚಿನ ಮಕ್ಕಳು ಕಾಲಾವಕಾಶ ಕೇಳುವುದು ಸಹಜ. ಅದ್ದರಿಂದ ಒಂದು ಅಥವಾ ಎರಡು ವರ್ಷ ಮೊದಲೇ ಪೀಟಿಕೆ ಹಾಗುವುದು ಉತ್ತಮ.
೩. “ಮಗ / ಮಗಳು ನಮ್ಮ ಮಾತು ಮೀರುವುದಿಲ್ಲ” ಎಂಬುದು ನಿಮ್ಮ ಮಾತಾದರೆ, ಆ ಮದುವೆಯ ವಯಸ್ಸಿನಲ್ಲಿ ಅವರಲ್ಲಿ ಅಸೆ / ಆಕಾಂಕ್ಷೆಗಳಿಲ್ಲ ಅನ್ನುವುದಲ್ಲ, ಅವರನ್ನು ನೀವು ವಿಚಾರಿಸಿಲ್ಲ ಎಂಬ ಅರ್ಥ ಕೊಡುತ್ತದೆ.
೪.
Recent Comments