ವಾಟ್ಸ್ ಆಪ್ ನಲ್ಲಿ ವಧು ವರರನ್ನು ಹುಡುಕುವವರಿಗೆ ಕೆಲವು ಸಲಹೆಗಳು.
ಮಿತ್ರರೇ,
ವಾಟ್ಸ್ ಆಪ್ ಹೆಚ್ಚಾಗಿ ಒಬ್ಬರನ್ನೊಬ್ಬರು ಸಂಪರ್ಕಿಸಲು / ವ್ಯವಹರಿಸಲು / ವಿಷಯ ವಿನಿಮಯ ಮಾಡಲು ಸಾಮಾಜಿಕ ಜಾಲತಾಣದಲ್ಲಿ ಸೂಕ್ತವಾದ ಆಪ್. ವ್ಯವಹಾರ ಮಾಡಲೂ ಇದರಲ್ಲಿ ಸುಲಭ ಉಪಾಯಗಳಿವೆ. ಆದರೆ ವಧು ವರಾನ್ವೇಷಣೆ ಮಾಡುವಾಗ ಕೆಲವು ನಿಯಮಗಳನ್ನು ನೀವೂ ಪಾಲಿಸಬೇಕು ಹಾಗು ಕೆಲವು ಷರತ್ತುಗಳಿಗೆ ಬದ್ದರಾಗಬೇಕಾಗುತ್ತದೆ. ಗ್ರೂಪ್ ಅಡ್ಮಿನ್ ಆದವರೂ ಕೂಡ ಬಹಳ ಸೂಕ್ಷ್ಮವಾಗಿ ತಮ್ಮ ಗ್ರೂಪ್ ನಲ್ಲಿ ಇರುವ ಎಲ್ಲಾರನ್ನು ಹತೋಟಿಯಲ್ಲಿ ಇಡಬೇಕಾಗುತ್ತದೆ.
Brahmin Matrimony, Vadhu Vara Anveshane, Kannada Brahmin Matrimony, Karnataka Brahmin Matrimony, Smartha Brides, Smartha Grooms, Madhwa Brides, madhwa Grooms ಅನ್ನುವ ಹತ್ತು ಹಲವು ವಾಟ್ಸಪ್ ಗ್ರೂಪ್ ಗಳನ್ನೂ ಎಂದು ಹಲವರು ಸೃಷ್ಟಿಸಿದ್ದಾರೆ .
ವಾಟ್ಸ್ ಆಪ್ ನಲ್ಲಿ ವಧು- ವರಾನ್ವೇಷಣೆ ಮಾಡುವುದು ಸುಲಭ ಹಾಗು ಉಚಿತ. ಮದುವೆಯ ವಿಚಾರವಾಗಿ ಇಲ್ಲಿ ಹಲವು ಗ್ರೂಪ್ ಗಳು ಚಾಲತಿಯಲ್ಲಿ ಇವೆ ಹಾಗು ಉಚಿತ ಮಾಹಿತಿಯನ್ನು ನೀಡಲು ಸಹಾಯಕವಾಗಿದೆ. ಇಂತಹಾ ಸೋಶಿಯಲ್ ಮೀಡಿಯಾಗಳ ವಿಸ್ತಾರ, ವೇಗ ಹಾಗು ಶಕ್ತಿ ಅದ್ಬುತ. ತ್ವರಿತವಾದ ಫೀಡ್ ಬ್ಯಾಕ್, ಟೀಕೆ, ಟಿಪ್ಪಣಿಗಳು, ಉಲ್ಲೇಖಗಳು ಅಸಾಮಾನ್ಯವಾದದ್ದು.
ಆದರೆ, ಈ ಇಂಟರ್ನೆಟ್ ಸಾಮಾಜಿಕ ಜಾಲತಾಣಗಳಲ್ಲಿ ನಮಗೆ ಎಷ್ಟು ಉಪಯೋಗವಿದೆಯೋ ಅಷ್ಟೇ ಅನಾನುಕೂಲಗಳೂ ಇವೆ. ವಾಟ್ಸ್ ಆಪ್ ನಲ್ಲಿ ವಧು ವರರನ್ನು ಹುಡುಕಲು ಕೆಲವರು ಮುಜಗರ ತೋರಿದರೆ ಇನ್ನು ಕೆಲವರು ಅಜಾಗರೂಕರಾಗಿರುತ್ತಾರೆ. ಸ್ನೇಹಿತರೊಡನೆ ಮನಸ್ತಾಪ, ದಾಂಪತ್ಯದಲ್ಲಿ ವಿರಸ ಹಾಗು ಹಲವು ಆತ್ಮಹತ್ಯೆಯ ಕಥೆಗಳಿಗೆ ಇದು ನಾಂದಿಯಾಗಿವೆ. ಈ ಜಾಲತಾಣದಲ್ಲಿ ಸಂಬಂಧವನ್ನು ಕಟ್ಟುವಾಗ ನಿಮ್ಮ ಎಚ್ಚರಿಕೆಯಲ್ಲಿ ನೀವು ಇರುವುದು ಸೂಕ್ತ. ವಾಟ್ಸ್ ಆಪ್ ನಲ್ಲಿ ಗಂಡು-ಹೆಣ್ಣು ಹುಡುಕುವವರು ಕೆಲವು ಸಲಹೆಗಳು….
೧. ವಧು / ವರ ಅಥವಾ ಅವರ ಮನೆಯವರನ್ನು ಮೊದಲಬಾರಿಗೆ ವಾಟ್ಸ್ ಆಪ್ ಮೂಲಕ ಸಂಪರ್ಕಿಸುವುದು ವಿನಯವಲ್ಲ. ಮೊದಲು ಅವರೊಂದಿಗೆ ಕರೆ ಮೂಲಕ ಸಂಪರ್ಕಿಸಿ, ನಂತರ ಕೆಲವು ವಿಚಾರಗಳನ್ನು ( ಫೋಟೋ , ಜಾತಕ ಹಾಗು ಹುಡುಗ / ಹುಡುಗಿಯರ ಮಾಹಿತಿಯನ್ನು) ವಾಟ್ಸ್ ಆಪ್ ಮೂಲಕ ಹಂಚಿಕೊಳ್ಳಿ. ನಿಮ್ಮ ಇಚ್ಛೆಯನ್ನು ವಾಟ್ಸ್ ಆಪ್ ನಲ್ಲಿ ತಿಳಿಸಿ, ಸಂಬಂಧ ಬೆಳಸಲು ಅನುಕೂಲವಾದರೆ ಮತ್ತೆ ಕರೆ ಮೂಲಕ ಮುಂದುವರೆಯುವುದು ಉತ್ತಮ.
೨. ವಾಟ್ಸ್ ಆಪ್ ಲೈಕ್ನೊಂದಿಗೆ ಸಂಬಂಧಗಳ ಕಟ್ಟುವ ಕನಸು ಕಾಣಬೇಡಿ. ಸಮಸ್ಯೆಗಳೂ ಇಲ್ಲೇ ಶುರುವಾಗುವುದು. ಇದನ್ನು ಪ್ರಥಮ ಮಾಹಿತಿ ಮಾಧ್ಯಮವಾಗಿ ಮಾತ್ರ ಉಪಯೋಗಿಸಿ, ಹೆಚ್ಚಿನ ವಿಷಯಗಳನ್ನು ವಧು ವರರ ಭೇಟಿಯ ಮುನ್ನ ವಿನಿಮಯ ಮಾಡಿಕೊಳ್ಳಿ.
೩. ವಾಟ್ಸ್ ಆಪ್ ಗ್ರೂಪ್ ಗಳಲ್ಲಿ ವರ ಹಾಗು ಕನ್ಯೆಯರ ಹೆಸರು ಹಾಕಬೇಡಿ. ವಯಸ್ಸು, ಎತ್ತರ, ವಿದ್ಯಾರ್ಹತೆ, ಗೋತ್ರ, ನಕ್ಷತ್ರ, ಹುಡುಗ ಅಥವಾ ಹುಡುಗಿ ಕೆಲಸ ಮಾಡುವ ಊರು, ಉದ್ಯೋಗ (ಸೀಮಿತವಾದ ಮಾಹಿತಿ) ಹಾಗು ನಿಮ್ಮ ಅಪೇಕ್ಷಾ ವಿಚಾರಗಳನ್ನು ಮಾತ್ರ ಪೋಸ್ಟ್ ಮಾಡುವುದು ಉತ್ತಮ, ಹುಡುಗ / ಹುಡುಗಿಯರ ಉದ್ಯೋಗ ಮಾಡುವ ಕಂಪನಿಯ ಹೆಸರು ಹಾಕಬೇಡಿ. ( Private, MNC, Govt, Renowned Hospital .. ಹೀಗೆ ಮಾತ್ರ ಬರೆಯುವುದು ಸೂಕ್ತ)
೪. ವಾಟ್ಸ್ ಆಪ್ ಅಥವಾ ಇನ್ನಾವುದೇ ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದವರನ್ನು ಒಂಟಿಯಾಗಿ ಮೊದಲಬಾರಿ ಭೇಟಿಯಾಗದಿರಿ. ಭೇಟಿಯ ಸ್ಥಳ ಜನಸಂದಣಿ ಇರುವ ಜಾಗಗಳಾಗಿರುವುದು ಅವಶ್ಯಕ.
೫. ಯಾವುದೇ ಸಂಬಂಧಗಳು ಗಟ್ಟಿಯಾಗಬೇಕಾದರೆ ಪರಸ್ಪರ ವಿಶ್ವಾಸ ಮುಖ್ಯ. ಆ ವಿಶ್ವಾಸ ಗಳಿಸುವುದು ಹಾಗು ಅದರ ಭದ್ರತೆಗೆ ನೀವೇ ಜವಾಬ್ದಾರರು. ಅನುಮಾನಗಳಿಗೆ ಆಸ್ಪದ ಮಾಡಿಕೊಳ್ಳಬೇಡಿ ಹಾಗು ನಿಮ್ಮ ಅನುಮಾನಗಳನ್ನು ಮರೆಮಾಚಬೇಡಿ. ವಾಟ್ಸ್ ಆಪ್ ಗ್ರೂಪ್ ಅಡ್ಮಿನ್ ದೂಷಿಸಿ ಯಾವ ಪ್ರಯೋಜನವೂ ಆಗುವುದಿಲ್ಲ.
೬. “An Known devil is better than an unknown Angel ” – ಸೋಶಿಯಲ್ ಮೀಡಿಯಾ ದಲ್ಲಿ ಸಿಗುವ ಎಲ್ಲಾ ಮಾಹಿತಿಗಳ ವಿಶ್ವಾಸಾರ್ಹವಲ್ಲ . ಇದರ ಧೃಡೀಕರಣ ನಿಮ್ಮ ಜವಾಬ್ದಾರಿಯಾಗಿರುತ್ತದೆ. ನಿಮಗೆ ವೈಯಕ್ತಿಕವಾಗಿ ಪರಿಚಯದವರ ಸಂಬಂಧ ಬೆಳಸುವುದು ಯಾವಾಗಲೂ ಒಳ್ಳೆಯದು. ಅದಕ್ಕೆ ಮುಖ್ಯವಾಗಿ ನಿಮ್ಮ ವೈಯಕ್ತಿಕ ನೆಟ್ವರ್ಕ್ ಚೆನ್ನಾಗಿ ಇರಬೇಕು. ಮಿತ್ರರು ಹಾಗು ಸಂಬಂಧಿಕರೊಡನೆ ಒಳ್ಳೆಯ ಬಾಂಧವ್ಯವನ್ನು ಬೆಳೆಸಿರಬೇಕು.
೭. ಪೂರ್ಣಮಾಹಿತಿಗಳನ್ನು ವಾಟ್ಸ್ ಆಪ್ ಅಥವಾ ಇನ್ನಾವ ಸೋಶಿಯಲ್ ಮೀಡಿಯಾದಲ್ಲಿ ಗ್ರೂಪ್ ಗಳಲ್ಲಿ ಹಾಕಬೇಡಿ. ಈ ಗ್ರೂಪ್ ಗಳಲ್ಲಿ ಬ್ರೋಕರ್ ಗಳು, ದಲ್ಲಾಳಿಗಳು ಇರುವ ಸಾಧ್ಯತೆಗಳು ಹೆಚ್ಹು. ನಿಮ್ಮ ಪ್ರೊಫೈಲ್ ಗಳು ನಿಮ್ಮ ಹಿಡಿತದಲ್ಲಿ ಇರುವುದಿಲ್ಲ ಹಾಗು ಅದು ಶೇರ್ ಆಗುವು ಹಾದಿ ನಿಮಗೆ ತಿಳಿಯಲು ಸಾಧ್ಯವಿಲ್ಲ. ಗ್ರೂಪ್ ಅಡ್ಮಿನ್ ಗಳೊಂದಿಗೆ ವೈಯಕ್ತಿಕವಾಗಿ ಸಂಪರ್ಕದಲ್ಲಿರುವುದು ಒಳ್ಳೆಯದು,
೮. ನಿಮಗೆ ಸಂಪರ್ಕವಿಲ್ಲದವರ ಪ್ರೊಫೈಲ್ ಗಳನ್ನೂ ಖಂಡಿತವಾಗಿ ಪೋಸ್ಟ್ / ಫಾರ್ವರ್ಡ್ ಮಾಡಬೇಡಿ, ವಧು ವರಾನ್ವೇಷಣೆ ಯ ಗ್ರೂಪ್ ಉಪಯುಕ್ತವೆನ್ನಿಸಿದರೆ ಅದರ ಬಗ್ಗೆ ಅನುಕೂಲವಾಗುವವರಿಗೆ ಮಾಹಿತಿ ನೀಡಿ.
೯. ನೆನಪಿರಲಿ….ಕೊನೆಯದಾದರೂ ಬಹುಮುಖ್ಯ – ವಾಟ್ಸ್ ಆಪ್ ನಲ್ಲಿ ಯಾವ ವಿಧವಾದ ಸೆಕ್ಯೂರಿಟಿ ಇಲ್ಲವೆಂದು ನಿಮಗೆ ತಿಳಿದಿರಲಿ. ನಿಮ್ಮ ವಧು / ವರರ ಮಾಹಿತಿ ಎಲ್ಲಿಯವರಿಗೆ ಮುಟ್ಟುವುದು ಎಂದು ಹೇಳಲಾಗುವುದಿಲ್ಲ. ಗ್ರೂಪ್ ಅಡ್ಮಿನ್ ಅವರುಗಳ ಸದುದ್ದೇಶವನ್ನು ಅನರ್ಥ ಮಾಡುವವರು ಬಹಳಷ್ಟು ಜನ ಇಲ್ಲಿ ಸಿಗುತ್ತಾರೆ.
೧೦. ಎಚ್ಚರ – ನಿಮ್ಮ ಹುಡುಗ / ಹುಡುಗಿಯ ಮಾಹಿತಿ ಮದುವೆಯಾದಮೇಲೂ ಹಲವು ವಾಟ್ಸ್ ಆಪ್ ಗ್ರೂಪ್ ಗಳಲ್ಲಿ ಸುತ್ತಬಹುದು. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.
ಗ್ರೂಪ್ ಗಳನ್ನು ಯಾವ ವಿಷಯಕ್ಕಾಗಿ ರೂಪಿಸಿರುತ್ತಾರೋ ಅಂತಹಾ ವಿಚಾರಗಳನ್ನು ಬಿಟ್ಟು ಅನಾವಶ್ಯಕ ಮ್ಯಸೇಜ್ ಹಾಗು ಫಾರ್ವರ್ಡ್ ಗಳನ್ನೂ ಮಾಡಬೇಡಿ, ಇದರಿಂದ ಅಡ್ಮಿನ್ ಹಾಗು ನಿಮ್ಮ ಗ್ರೂಪ್ ನಲ್ಲಿನ ಸದಸ್ಯರು ನಿಮ್ಮ ಬಗ್ಗೆ ಕಂಡಿತಾ ಬೇಸರ ಪಡುತ್ತಾರೆ.
ನಂಬಿಕೆಗಿಂತ ಸಂದೇಹವೇ ಹೆಚ್ಚಾದರೆ ಯಾವ ಸಂಬಂಧವೂ ಉಳಿಯುವುದಿಲ್ಲ. ಸಂದೇಹದ ನಡುವೆ ನಂಬಿಕೆ ಗಟ್ಟಿಯಾಗಿದ್ದರೆ ಯಾವ ಮನಸ್ಸು ಮುರಿಯುವುದಿಲ್ಲ
ಶುಭವಾಗಲಿ
ಆನುರಾಗ ಮ್ಯಾಟ್ರಿಮೊನಿ ಯಲ್ಲಿ ರಿಜಿಸ್ಟರ್ ಮಾಡಲು ಇಲ್ಲಿ ಕ್ಲಿಕ್ಕ್ ಮಾಡಿ
Right