Statistics of Brahmin Brides and Grooms

ಬ್ರಾಹ್ಮಣ ಸಮುದಾಯದಲ್ಲಿ ವಧು ವರರ ಹೊಂದಾಣಿಕೆಯ ಸಮಸ್ಯೆ ಅತ್ಯಂತ ಕಷ್ಟಕರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ವಧು-ವರರನ್ನು ಆರಿಸುವುದು ಪೋಷಕರಿಗೆ ಇಂದು ಅತ್ಯಂತ ಜಟಿಲ ಸಮಸ್ಯೆಯಾಗಿದೆ. ಬ್ರಾಹ್ಮಣ ಸಮುದಾಯದಲ್ಲಿ ಇಂದಿರುವ  ವಧು-ವರರ  ಅಂಕಿ-ಅಂಶಗಳನ್ನು  ಅವಲೋಕಿಸೋಣ.                                                               Read in English


ವಧು ವರರನ್ನು ಆರಿಸುವಾಗ ಮುಖ್ಯವಾಗಿ ಪರಿಗಣಿಸುವ ಅಂಶಗಳೆಂದರೆ ವಯಸ್ಸು, ವಿದ್ಯಾರ್ಹತೆ , ಉದ್ಯೋಗ, ಆದಾಯ, ವಾಸಸ್ಥಳ. ಬ್ರಾಹ್ಮಣ ಸಮುದಾಯದಲ್ಲಿ ಉಪಪಂಗಡ, ಗೋತ್ರ, ನಕ್ಷತ್ರಗಳನ್ನ ಪರಿಗಣಿಸುವುದು ಸಹಜ. ಇವುಗಳೊಂದಿಗೆ ಲಕ್ಷಣ, ಮಾತೃಭಾಷೆ ಹಾಗು ಆರ್ಥಿಕ ಸ್ಥಿತಿಯನ್ನು ಎಲ್ಲರೂ ಅವಲೋಕಿಸುವರು.

ದಕ್ಸಿಣ ಭಾರತದ ಬ್ರಾಹ್ಮಣರನ್ನು ತ್ರಿಮತಸ್ಥ (ಸ್ಮಾರ್ತ , ವೈಷ್ಣವ (ಮಾಧ್ವ), ಹಾಗು ಶ್ರೀವೈಷ್ಣವ (ಅಯ್ಯಂಗಾರ್) ಬ್ರಾಹ್ಮಣರೆಂದು ಗುರುತಿಸಲಾಗಿದ್ದು, ಈ ಮೂರು ಪಂಗಡಗಳ ಉಪಪಂಗಡಗಳು ಸುಮಾರು ೮೦ಕ್ಕೂ ಹೆಚ್ಚು ಇದೆ. ಸ್ಮಾರ್ತರು ಸಾಮಾನ್ಯವಾಗು ಪ್ರಾಂತ್ಯಗಳ ಮೇಲೆ ವಿಭಜನೆಯಾದರೆ, ಮಾಧ್ವರು ಮಠಗಳಿಂದ ಗುರುತಿಸಲ್ಪಡುತ್ತಾರೆ. ಶ್ರೀವೈಷ್ಣವರಲ್ಲೇ ವಡಗಾಲೆ  ಹಾಗು ತೆಂಗಲೆ ಎಂಬ ಮುಖ್ಯ ಉಪಪಂಗಡಗಳಾದರೂ, ಹಲವಾರು ಪ್ರಾಂತ್ಯವಾರು ಉಪಪಂಗಡಗಳು ಇವೆ. ಒಟ್ಟಾರೆ ತ್ರಿಮತಸ್ಥ ಬ್ರಾಹ್ಮಣರಲ್ಲಿ 80ಕ್ಕೂ ಹೆಚ್ಚು ಉಪಪಂಗಡಗಳಿದ್ದು ಭಾಷೆ, ಒತ್ತು , ಆಚಾರ -ವಿಚಾರ, ನಂಬಿಕೆ, ಮೂಲ ಉದ್ಯೋಗ  ಹೀಗೆ ಹಲವು ಭಿನ್ನತೆಗಳಿಂದ ಬೇರ್ಪಟ್ಟಿದೆ.

 ಈ ತ್ರಿಮತಸ್ಥ ಬ್ರಾಹ್ಮಣರಲ್ಲಿ  ಒಟ್ಟಾರೆ ಮದುವೆಯ ವಿಚಾರದಲ್ಲಿ ಪರಿಗಣಿಸುವುದು ಗೋತ್ರಗಳು.  ಒಂಭತ್ತು ಮುಖ್ಯ ಗೋತ್ರಗಳು ಹಾಗು ಹಲವು ಇತರೆ ಗೋತ್ರಗಳು ಈ ಮೂರು ಪಂಗಡಗಳಲ್ಲಿ  ಹಂಚಿದೆ. ಸಾಮಾನ್ಯವಾಗಿ ಒಂದೇ ಗೋತ್ರದವರು ಒಂದು ಕುಟುಂಬಕ್ಕೆ ಸೇರುತ್ತಾರೆಂದು  ಈ ಸಂಬಂಧ ಬ್ರಾಹ್ಮಣರಲ್ಲಿ ಕೂಡದಾಗಿದೆ.

ಜಾತಕದ  ಪರಿಗಣನೆ ಹಾಗು ಹೊಂದಾಣಿಕೆ ಮದುವೆಯ ವಿಚಾರದಲ್ಲಿ ಬ್ರಾಹ್ಮಣರಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಕೆಲವರು ಗೋತ್ರ, ರಾಶಿ ಮತ್ತು ನಕ್ಷತ್ರ ಹೊಂದಾಣಿಕೆಯಿಂದ ಮುಂದುವರೆವವರಾದರೆ, ಹಲವರು  ಗಣ  ಮತ್ತು  ಕೂಟಗಳನ್ನೂ  ಪರಿಗಣಿಸುವರು.

ವರ -ಕನ್ಯೆಯರ ವಯಸ್ಸಿನ ಅಂತರದ ಒಲವು ಬದಲಾಗುತ್ತಿರುತ್ತದೆ.  ಪ್ರಸ್ತುತ ಸನ್ನಿವೇಶದಲ್ಲಿ ಹೆಣ್ಣುಮಕ್ಕಳಿಗೆ 25ನೇ ವಯಸ್ಸಿನ ನಂತರ ಮದುವೆ ಮಾಡುವವರಾದರೆ, ಗಂಡುಮಕ್ಕಳ ವಯಸ್ಸು 27ರ ನಂತರ ಹೆಚ್ಚು. ಹೆಣ್ಣು ಮಕ್ಕಳ ಮದುವೆಯ ಶೇಕಡಾವಾರು ವಯಸ್ಸು ಹೆಚ್ಚಾಗುತ್ತಿದ್ದು , ಗಂಡುಮಕ್ಕಳ ವಯಸ್ಸು 30 ರಲ್ಲಿದೆ.

ಬ್ರಾಹ್ಮಣರಲ್ಲಿ ಕನ್ಯೆಯರ ಕೊರತೆ ಇದೆ ಎಂದು ಎಲ್ಲರೂ ನಂಬಿದ್ದರಷ್ಟೇ , ಆದರೆ  ಮದುವೆಯ ಸರಿಯಾದ ವಯಸ್ಸಿನಲ್ಲಿ ( ಹೆಣ್ಣು  –  21 ರಿಂದ  26,  ಗಂಡು – 26  ರಿಂದ 30 ) ಈ ಅನುಪಾತ 1:1 ದೇ  ಇದೆ.  ಆದರೆ ಇಲ್ಲಿ  ವ್ಯತ್ಯಾಸವಾಗುತ್ತಿರುವುದು ವಿದ್ಯಾರ್ಹತೆ ಹಾಗೂ  ಉದ್ಯೋಗ. ಉದ್ಯೋಗದಿಂದ ಮಹಾನಗರಗಳ ವಾಸ್ತವ್ಯ ಹೆಚ್ಚಾಗುತ್ತಿದ್ದು ಹಳ್ಳಿ ಹಾಗೂ  ಪಟ್ಟಣ ಜೀವನ ಬೇಡವೆನ್ನುವ ಹೆಣ್ಣು ಮಕ್ಕಳ ಸಂಖ್ಯೆ ಅಧಿಕವಾಗಿದೆ. ಕನ್ಯೆಯರಿಗೆ 28 ನೇ ವಯಸ್ಸಿನ ಮೊದಲು ಮದುವೆಯಾಗುವುದು ಸಾಮಾನ್ಯವಾದರೆ, ಹೆಚ್ಚಿನ ವಿದ್ಯೆ ಹಾಗು ಆದಾಯವಿರುವವರಿಗೆ 30ನೇ ವಯಸ್ಸು ದಾಟುತ್ತಿರುವುದು ಗಣನೀಯವಾಗಿದೆ.  ಹೆಣ್ಣು ಮತ್ತು ಗಂಡಿನ ಅನುಪಾತ ವಯಸ್ಸಾಗುತ್ತ ಅಧಿಕವಾಗಿ ಮದುವೆಯ ಸಮಸ್ಯೆ ಉಲ್ಬಣವಾಗುತ್ತಿದೆ.

ಬ್ರಾಹ್ಮಣ  ವಧು ವರರಲ್ಲಿ ಅಸಮಾನತೆ ವಿಷಯವೆಂದರೆ ವಿದ್ಯೆ , ಉದ್ಯೋಗ ಹಾಗು ವಾಸಿಸುವ ಸ್ಥಳ. ಕನಿಷ್ಠ ವಿದ್ಯೆ  ಇರುವ ಹೆಣ್ಣುಮಕ್ಕಳು  ಬ್ರಾಹ್ಮಣರಲ್ಲೇ ಇಲ್ಲವೆಂದು ಬೆನ್ನು ತಟ್ಟಿಕೊಳ್ಳಬಹುದಾದರೂ, ಮದುವೆಯ ವಿಚಾರದಲ್ಲೇ ಇದು ದೊಡ್ಡ ಸಮಸ್ಯೆಯಾಗಿದೆ. ಇಂಜಿನಿಯರ್  ಅಥವಾ ಡಾಕ್ಟರ್ ಆಗುವ ಹಂಬಲ ಹೆಣ್ಣುಮಕ್ಕಳಲ್ಲಿ ಹೆಚ್ಚಾಗಿದ್ದರೂ, ಬೇರೆ ಪ್ರವೃತ್ತಿಯ ಒಲವು ತೋರಿಸುವವರ ಸಂಖ್ಯೆಯೂ  ಬೆಳೆಯುತ್ತಿದೆ. ಆದರೆ ವರರು ಹೆಚ್ಚು ದುಡಿಯುವ ಅಥವಾ ಒಳ್ಳೆಯ ವೃತ್ತಿಯಲ್ಲಿರುವವರನ್ನು ತಮ್ಮ ಬಾಳಸಂಗಾತಿಯಾಗಿ ಪಡೆಯಲು ಬಯಸುವುದಿಲ್ಲ. ಇದರಿಂದ ಉನ್ನತ ಸ್ಥಾನದಲ್ಲಿರುವ ಹೆಣ್ಣು ಮಕ್ಕಳಿಗೆ ಸರಿಯಾದ ವರರು ಸಿಗುವುದು ಅಲ್ಪವಾಗಿದೆ. ಡಾಕ್ಟರ್, ಪಿ.ಹಚ್.ಡಿ ಹಾಗು ಉನ್ನತ ವಿದ್ಯೆ ಮತ್ತು  ಉದ್ಯೋಗದಲ್ಲಿ ಗಂಡು ಹೆಣ್ಣಿನ ಅನುಪಾತ ವ್ಯತಿರಿಕ್ತವಾಗಿದೆ .

ಬಹುಪಾಲು ಹುಡುಗಿಯರು ಎಲೆಕ್ಟ್ರಾನಿಕ್ಸ್ , ಸಾಫ್ಟ್ವೇರ್ ಮತ್ತು ವೈದ್ಯಕೀಯ ವೃತ್ತಿಗಳಲ್ಲಿ ಹಂಚಿದ್ದಾರೆಂದು ಉದ್ಯೋಗವಾರು ಅಂಕಿ ಅಂಶಗಳು ಹೇಳುತ್ತದೆ. ಆದರೆ ಹುಡುಗರು ಹಲವಾರು ತರಹದ ವೃತ್ತಿಗಳನ್ನು ಆರಿಸಿಕೊಂಡಿದ್ದಾರೆ . ಹೆಚ್ಚು ಆದಾಯದ ವೃತ್ತಿಗಳನ್ನು ಹೆಣ್ಣುಮಕ್ಕಳೇ ತುಂಬುತ್ತಿದ್ದು ಹುಡುಗರಿಂದ ಸಂಖ್ಯೆಯಲ್ಲಿ ಬಹಳ ದೂರವಿದ್ದಾರೆ. ಹುಡುಗಿಯರು ತಮ್ಮನ್ನು ವರಿಸುವವರು ತಮ್ಮ ವೃತ್ತಿಯಲ್ಲೇ ಇರುವವರು ಬೇಕೆಂದು ಬಯಸುತ್ತಿದ್ದು, ಅನ್ಯ ವೃತ್ತಿಯಲ್ಲಿರುವ ಹುಡುಗರಿಗೆ ವಧುಗಳು ಸಿಗುವುದು ಸಮಸ್ಯೆಯಾಗಿದೆ. ಹೆಚ್ಚು ಆದಾಯವಿರುವ ಹುಡುಗರು ವೃತ್ತಿ ನಿರತರಾದ ಅಥವಾ ಅಧಿಕ ಆದಾಯವಿರುವ ಹುಡುಗಿಯರನ್ನು ನಿರಾಕರಿಸುತ್ತಾರೆ.


ಯುವಜನಾಂಗವು ಹಳ್ಳಿಗಳನ್ನು ಬಿಟ್ಟು ಪಟ್ಟಣ ಹಾಗೂ  ನಗರಗಳನ್ನು ಸೇರಿದ್ದು, ಹಳ್ಳಿಗಳು ಶೂನ್ಯವಾಗಿವೆ. ಹಳ್ಳಿ ಬಿಟ್ಟ ಹುಡುಗರು, ಪಟ್ಟಣ / ನಗರದಲ್ಲಿ ಸರಿಯಾದ ನೆಲೆ ಕಾಣದೆ ಮದುವೆಯ ಆಸೆಯನ್ನೇ ಬಿಟ್ಟಿರುವವರು ಅದೆಷ್ಟೋ.  ಹೆಣ್ಣು ಮಕ್ಕಳು ಹಾಗೂ  ಅವರ ಪೋಷಕರಿಗೆ ಪಟ್ಟಣ ಹಾಗು ನಗರಗಳ ವರಗಳೇ ಬೇಕಾಗಿದ್ದು , ಕರ್ನಾಟಕದಲ್ಲಿ ಇದು ಬೆಂಗಳೂರಿಗೆ ಸೀಮಿತಗೊಂಡಿದೆ. ಬಹುಪಾಲು ಕನ್ಯೆಯರು ವಿದೇಶದಲ್ಲಿರುವವರನ್ನು ವರಿಸಲು ಇಚ್ಛಿಸುತ್ತಾರೆ, ಅದರಲ್ಲೂ ಅಮೇರಿಕಾ ಬೇಕೆನ್ನುವರ ಸಂಖ್ಯೆ ಹೆಚ್ಚಾಗಿದೆ. ಆದರೆ ಅಮೇರಿಕಾದ ಇತ್ತೀಚಿನ ವೀಸಾ ನಿಯಮಾವಳಿಗಳಿಂದ ಕನ್ಯೆಯರು ಮತ್ತು ಪೋಷಕರು ಮರುಯೋಚನೆ ಮಾಡುವಂತಾಗಿದೆ. ವಿದೇಶದಲ್ಲಿ ಓದುತ್ತಿರುವ ಹಾಗು ಕೆಲಸದಲ್ಲಿರುವ ಹುಡುಗಿಯರಿಗೆ ಆ ದೇಶದಲ್ಲೇ ಇರುವ ವರರನ್ನು ಬಯಸುವುದರಿಂದ ಮದುವೆಯ ಸಮಸ್ಯೆ ಹೆಚ್ಚಾಗಿದೆ.  

ಮೇಲಿನ ಅಂಕಿ ಅಂಶಗಳನ್ನು  ವಿಶ್ಲೇಷಿಸಿದಾಗ ವಧು ವರರ ಸಮಸ್ಯೆ ಜಟಿಲವೆನ್ನಿಸುವುದು ಸಹಜ.  ಕನ್ನಡ, ತಮಿಳು, ತೆಲುಗು, ತುಳು, ಸಂಕೇತಿ, ಮರಾಠಿ ಮುಂತಾದ ಪ್ರಮುಖ ಭಾಷೆ ಕರ್ನಾಟಕದ ಬ್ರಾಹ್ಮಣರಲ್ಲಿ ಮಾತೃಭಾಷೆಯಾಗಿದ್ದು ಮದುವೆಯ ವಿಚಾರದಲ್ಲಿ ಒಂದು ಗಣನೀಯ ಅಂಶವಾಗಿದೆ. ಇಷ್ಟೆಲ್ಲಾ ನೀರಿಕ್ಷೆಯೊಂದಿಗೆ ಲಕ್ಷಣ, ಅಸ್ತಿ-ಅಂತಸ್ತುಗಳು,  ಉರಿಯುವ ಬೆಂಕಿಗೆ ತುಪ್ಪ ಹಾಕಿದಂತೆ.

ಬ್ರಾಹ್ಮಣ ಸಮುದಯವು ಮುಂದಿನ ಪೀಳಿಗೆ ಅತ್ಯಂತ ಕ್ಲಿಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆಯೆಂದು ಈ ಸಮೀಕ್ಷೆಯಿಂದ ಬಹಿರಂಗವಾಗುವುದು.   ಸುಮಾರು 40% ಬ್ರಾಹ್ಮಣ ವರರಿಗೆ ಮದುವೆಯು ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿ ಎಲ್ಲರಿಗೂ ತಿಳಿದಿದೆ, ಆದರೆ 20% ಕನ್ಯೆಯರಿಗೂ ವಿವಾಹದ ಭಾಗ್ಯ ಕೈ ಮೀರುತ್ತಿದೆ ಎನ್ನುವುದು ಸತ್ಯ.  

ಈ ವಿಶ್ಲೇಷಣೆಯಿಂದ ತಿಳಿಯಬಹುದಾದಂತಹ ಕೆಲವು ಎಚ್ಚರಿಕೆಗಳು 

ಕನ್ಯೆಯರಿಗೆ 

೧. ಬ್ರಾಹ್ಮಣರಲ್ಲಿ ಡಾಕ್ಟರ್ ವರಗಳು ಬಹಳ ಅಲ್ಪ.
೨. ಭರತನಾಟ್ಯ, ಸಂಗೀತ , ಹಾಗೂ ಇನ್ನಿತರ ಕಲೆಗಳನ್ನು ಗೌರವಿಸುವ ಹಾಗೂ ಉತ್ತೇಜಿಸುವ ವರರು ಬಹಳ ಕ್ಷೀಣ. 
೩. ಲಾಯರ್ , ಪ್ರಸಾರ  ಹಾಗೂ ಪತ್ರಿಕೋದ್ಯಮದಲ್ಲಿರುವ ಹುಡುಗಿಯರನ್ನು ಬೇಡವೆನ್ನುವ ಹುಡುಗರೇ ಹೆಚ್ಚು.
೪. ಇಂಜಿನಿಯರಿಂಗ್ ಪದವಿಯನ್ನು ಮಾಡದ ಹುಡುಗಿಯರಿಗೆ ವಿದೇಶದಲ್ಲಿರುವ ಇಂಜಿನಿಯರಿಂಗ್ ಕ್ಷೇತ್ರದಲ್ಲಿರುವ ವರರು ಸೂಕ್ತವಲ್ಲ.
೫. ಉನ್ನತ ವ್ಯಾಸಂಗ, ಅಧಿಕ ವರಮಾನ ಹಾಗೂ ಉನ್ನತ ಮಟ್ಟದ ಪರಿವಾರದ ಹುಡುಗಿಯರಿಗೆ ತಕ್ಕ ವರರ ಸಂಖ್ಯೆ ಕಡಿಮೆ.
೬. ವಿದೇಶದಲ್ಲೇ  ಓದುತ್ತಿರುವ / ವೃತ್ತಿಯಲ್ಲಿರುವ ವಧುಗಳು ಆ ದೇಶದಲ್ಲೇ ಇರುವ ವರರನ್ನು ಆರಿಸಬೇಕಾಗಿರುವುದು ದೊಡ್ಡ ಸವಾಲು.
೭. ಅಮೇರಿಕ ಮತ್ತು ಜರ್ಮನಿಯಲ್ಲಿ ಸಾಕಷ್ಟು ಹುಡುಗರಿದ್ದರೂ, ಹುಡುಗರಿಗೆ ಭಾರತದಿಂದ ಕನ್ಯೆಯರನ್ನು ಕರೆದೊಯ್ಯುವ ಸ್ವತಂತ್ರ ಹಲವು ಹುಡುಗರಿಗೆ ಆಶಾದಾಯಕ.

ವರರಿಗೆ 

೧. ವಯಸ್ಸು ಮೀರಿದ ಹುಡುಗಿಯರ ಸಂಖ್ಯೆ ಕಡಿಮೆ ಹಾಗೂ ಮಾಧ್ಯಮ ವರ್ಗದಲ್ಲಿ ಇನ್ನು ಕನಿಷ್ಠ.
೨. ಎಸ್ .ಎಸ್.ಎಲ್ .ಸಿ , ಪಿ.ಯು .ಸಿ , ಡಿಪ್ಲೋಮ ಮಾಡಿರುವ ಹುಡುಗರಿಗೆ ಆಯ್ಕೆಗಳೇ ಇಲ್ಲದಂತಾಗಿದೆ. ಇಂಜಿನಿಯರ್ ಅಲ್ಲದ ಪದವಿದಾರರಿಗೂ ಕೂಡ ಕನ್ಯೆ ಸಿಗುವುದು ಕಷ್ಟವಾಗಿದೆ.
೩. ನಟರು, ಸಂಗೀತಗಾರರು, ವ್ಯಾಪಾರಸ್ಥರು ಹಾಗೂ  ಸಣ್ಣ  ಉದ್ಯೋಗಸ್ಥರಿಗೆ  ಹುಡುಗಿಯರು ಸಿಗುವುದು ವಿರಳ.
೪. ಸಾಧಾರಣವಾಗಿ ಹುಡುಗಿಯರು ತಾವು ವಾಸಿಸುವ ಮಹಾನಗರ / ನಗರವನ್ನು ಬಿಟ್ಟು ಹಳ್ಳಿ /ಪಟ್ಟಣಗಳಿಗೆ ಬರಲು ಒಪ್ಪುಲಾರರು.
೫. ಅಧಿಕ ವ್ಯಾಸಂಗ ಹಾಗೂ  ಒಳ್ಳೆಯ ಆದಾಯವಿರುವ ಹುಡುಗರಿಗೂ ಕನ್ಯೆಯರು ಸಿಗುತ್ತಿಲ್ಲವೆನ್ನುವುದು ಶೋಚನೀಯ.

ಮೇಲಿನ ವಿಶ್ಲೇಷಣೆಯು ಇಂದಿನ ಯಥಾಸ್ಥಿತಿ. ಇದನ್ನು ಓದಿದ ಹಲವರಿಗೆ ಹಲವು ಪ್ರಶ್ನೆಗಳು ಉದ್ಭವಿಸುವುದು ಸಹಜ. ಸಮಾಜದಲ್ಲಿ ಬದಲಾವಣೆಯನ್ನ ತರುವುದು ಸುಲಭದ ಮಾತಲ್ಲ. ಅದು ಪ್ರತಿಯೊಬ್ಬರಲ್ಲೂ ಅವರೇ ಕಾಣಬೇಕಾದ ವ್ಯತ್ಯಾಸ. ಇಂದಿನ ಪರಿಸ್ಥಿತಿಯನ್ನು ಸಮುದಾಯಕ್ಕೆ ಅರಿವು ಮಾಡಿಸುವ ಒಂದು ಪ್ರಯತ್ನವಷ್ಟೇ.  

ಮದುವೆಯ ವಿಚಾರವಾಗಿ ಬ್ರಾಹ್ಮಣ ವರ್ಗದಲ್ಲಿ ಸುಧಾರಣೆಗೆ ಕೆಲವು ಅಂಶಗಳು 

೧. ಪೋಷಕರು ವರ – ಕನ್ಯೆಯರನ್ನು ಹುಡುಕುವ ಮೊದಲು ತಮ್ಮ ಮಕ್ಕಳಿಂದ ಒಪ್ಪಿಗೆ ಪಡೆಯಿರಿ .
೨. ಸೂಕ್ತ ವಯಸಿನಲ್ಲಿ ಮಕ್ಕಳಿಗೆ ಮದುವೆ  ಮಾಡುವುದು ( ಹೆಣ್ಣಿಗೆ 23-27, ಗಂಡಿಗೆ  27-30).
೩. ಬ್ರಾಹ್ಮಣ  ಸಮುದಾಯದ ಸಂಘ ಹಾಗೂ ಸಂಸ್ಥೆಗಳು ಒಟ್ಟಾಗಿ  ಶ್ರಮಿಸುವುದು. ಬಲವಾದ ಸಂಘಟನೆಗೆ ಸಹಕಾರ ಮತ್ತು ಸಮನ್ವಯ ಅತ್ಯಗತ್ಯ. 
೪. ಉಪಪಂಗಡಗಳಲ್ಲಿ ಮದುವೆಗೆ ಸಹಕಾರ ನೀಡುವುದು.
೫. ಬ್ರಾಹ್ಮಣ ಮುಖಂಡರು ಮತ್ತು ಮಠಾಧೀಶರುಗಳಿಂದ ಒಗ್ಗಟ್ಟಿಗೆ ಕರೆ ನೀಡುವುದು.
೬. ಪೋಷಕರಿಗೆ ಹಾಗು ವಧು-ವರರಿಗೆ ಸಾಮೂಹಿಕವಾಗಿ  ವಿಚಾರ ಕೂಟಗಳಲ್ಲಿ ಬೋಧಿಸುವುದು .
೭. ವೇದ ಹಾಗೂ  ಸಂಸ್ಕೃತ ಅಧ್ಯಯನ ಮಾಡುತ್ತಿರುವ ಹುಡುಗರಿಗೆ, ಸಾಮಾನ್ಯ ವೃತ್ತಿಯ ಕಡೆಗೂ ಜೊತೆಗೆ ತರಬೇತಿ ನೀಡುವುದು.

ಅನುರಾಗ ಮ್ಯಾಟ್ರಿಮೋನಿಯಲ್ಲಿ ವಧು / ವರರ ಮಾಹಿತಿಯನ್ನು ಪರಿಶೀಲಿಸಿ, ವಿಶ್ಲೇಷಸಿ ಸೂಕ್ತ ಮಾರ್ಗದರ್ಶನದೊಂದಿಗೆ ನೆರವು ನೀಡುತ್ತಿವೆ. ಸಂಪರ್ಕಕಕ್ಕಾಗಿ 8105626363ಗೆ ಕರೆ ಮಾಡಿ ಅಥವಾ ಕೆಳಗಿನ ಕಾಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ. 

ಅನುರಾಗ ಮ್ಯಾಟ್ರಿಮೋನಿಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ 

  1. ನಿಮ್ಮ ಮಾತು ಸರಿ, ವಾಸುದೇವ್ ಅವರೇ. ನಾವು ಮುಂದುವರೆದ ಜನಾಂಗ, ವಿದ್ಯಾವಂತರು. ಆದರೆ ಕೆಲವು ವಿಚಾರದಲ್ಲಿ ಇನ್ನು ತಿದ್ದಿಕೊಳ್ಳುವುದು ಬಹಳಷ್ಟಿದೆ.

  2. ವಧೂ ವರರ ತಂದೆ ತಾಯಿಗಳ ಪಾತ್ರ ಮದುವೆ ಮೊದಲು ಬಹಳಷ್ಟಿದೆ. ತಮ್ಮ ಮಗನ/ಮಗಳ ಬೇಕು/ಬೇಡಗಳನ್ನು ಸರಿಯಾಗಿ ತಿಳಿದು ಕೊಂಡು ಮೊದಲ ಹಂತದಲ್ಲಿ ಕನ್ಯಾ/ ವರರ ತಂದೆ ತಾಯಿಗಳೊಂದಿಗೆ…

  3. My DOB:06/08/1979 Birth Time: 12:30PM Birth Place: Madagondanahalli DODDABALLAPUR, Bangalore Rural Purvashada Nakshatra 4th Pada. Dhanassu Rasi. Ques: When I…

  4. Your Anuraga Matrimony work is great. Your analysis are true…the society and the thinking of the Brahmin community are not…

  5. ವೈಜ್ಞಾನಿಕವಾಗಿ ಹೇಳುವುದಾದರೆ ಹೆಣ್ಣುಮಕ್ಕಳಿಗೆ 21 ರಿಂದ 25 ಹಾಗು ಗಂಡು ಮಕ್ಕಳಿಗೆ 26 ರಿಂದ 30 ವಯಸ್ಸು ಸೂಕ್ತ. ಹೆಣ್ಣು ಅಥವಾ ಗಂಡು ಮಕ್ಕಳ ಮನಸ್ತಿತಿಯನ್ನು ಪರಿಗಣಿಸಿದಾಗ…

0Shares

32 Responses

  1. UsharaniManohar says:

    Good process

  2. Bharathi says:

    Yochane sareyagede

  3. Sushesha G S says:

    Good information

  4. Nagesh Rao says:

    Very good analysis…!! 1 more point to add..!! Brahmin girls getting love marriages with other cast boys.

  5. Damodar Deshpande says:

    Great work done.

  6. Krishna says:

    Very nice analysis n flow chart

  7. Sudendra.mg says:

    Nice Flow chart , and Anylasis. ,Good job

  8. b n srinivas rao says:

    Now the girls are not willing to marry unless they exhaust all opportunities to get dream boy and want to spend more with boy friends and they will not accept any advise from any body for early marriage that is before 28 to girl and before 33 years to boy . marriage after 25 years has become common. The boy wants to settle in life with financial stability and it starts in many cases only after 30 years. no body checks possibility or feasibility of marriage. many people are not serious of marriage and thinks early marriages are not needed as they require car/ bike and house etc; even before marriage. there is a life cycle and applies to both boys and girls which they are not learning. a subject is required to be introduced in degree level and counselled to all the marriage is needed at a particular stage of life.

    • Admin says:

      Well Said Sir, there is a need for counseling for brides, grooms as well as parents also. For Many wrong assumptions and expectations by parents and bride/grooms are delaying the marriage.

  9. Suresh kulkarni says:

    Nice job

  10. Gururaj S Joshi says:

    Good , correct & true information & definitely counselling is required to both brides & grooms through parents, elders & well wishers

  11. RAGHAVENDRA MAHADEV BHATT says:

    Some thing New. Good Analytic study hard accept but this is true picture of our community. Good work Sir.

  12. Muralidaran says:

    Correctly said. Inspite of our saints nobody comes forward. Girl having more than the salary of boy , does not want and vice versa. However as per the information,boys are more flexible . I had a instant a girl who got married recently after spending lot of money and ultimately failed and divorced. When a boy with ₹ ,20000 salary , girl is refused. But due to false prestige, the girl married earlier was got into trouble which she never realised. Money is a must but too much money alone will not bring happiness.

    • Admin says:

      Before the marriage, lot of analysis is required in terms of social, economical, education, customs and the mindset of bride, groom and their parents. It’s just not a good match & family, but the flexibility quotient in them is what matters.

  13. Krishna says:

    A very good analysis , first of it’s kind, I believe this analysis should not be taken lightly , since this is very alarming , I have seen many cases where girls are very particular about certain things things , of course boys are not behind though ! There has to be enough persuasion from parents as well for both boys and girls in order to be flexible on certain things , ( read it as materialistic things like , own house , car , overseas job ….. list goes on ) rather look for a life partner who can walk the path of life together ! If this does not happen sooner , there will be no next generation to see in this community !! Please spread this analysis to all parents , those un married boys and girls .

    Let them wake up before it’s too late !

  14. Manjunathramaswamy08@gmail.com R says:

    It difficult and good job.

  15. Gowrishankar mj says:

    Really a great information about present things,,,, who will solve the problem and what’s the remedy for this,,,,,,

    • Admin says:

      “Kalaya Tasmayh Namaha”.. Time is the best healer. Present situation in the community in regard to the marriage cannot be changed overnight or by an person or a group. Each individual has to take his path to correct this. As you all know the problem were different about 15-20 years and beyond. Girls and Parents of Bride were really frustrated. They had tackled the situation by making them educated… Hope we may find some solution in future.

  16. Gururaj says:

    really

  17. Ravish says:

    How to come out from these crisis, whom to contact to solve these problems.

    Vadu’s parents of smartha bramhins can contact 9845394469, my son who is working in Big MNC age 27 years looking for bride from decent family.

  18. N.Nataraj says:

    Please register our request

  19. k. venkatesha says:

    Your Anuraga Matrimony work is great. Your analysis are true…the society and the thinking of the Brahmin community are not at all good. The Guru Peeta of the different sects are same in old stage of 50 years back. The only improvement is Gurumata is the First circle of people busy in protecting Assets of mata. In my opinion, Call every needy person on one stage and collect opinions. It clearly shows a huge shortage of Girls to marry and give the child to the family. The shortage may be fulfilled by Bring Girls from Kashmir without filtering cast then make homes of our Brahmin community again Cheerful. The important thing is to see the Family Tree should grow.

    • Admin says:

      Dear Venkatesh, Thank you for the comments. With different statistics we are coming across everyday, we foresee that a minimum of 40% brahmin boys and 20% of the girls will not find their mate at all. Very few will be left behind to follow the Math’s ideology in future. Some of the community organisations had sincerely tried to get girls from north-India, but it went in vain because of the same set of demands from those parents, language and culture issues.

Leave a Reply

Your email address will not be published. Required fields are marked *